Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗ್ಯಾಸ್ ಪೂರೈಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ : ಕೆ.ಹೆಚ್.ಮುನಿಯಪ್ಪ ಬೇಸರ

---Advertisement---

ಗ್ಯಾಸ್ ಪೂರೈಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ : ಕೆ.ಹೆಚ್.ಮುನಿಯಪ್ಪ ಬೇಸರ

ಬಾಗಲಕೋಟೆ: ರಾಜ್ಯದಲ್ಲಿ ಗ್ಯಾಸ್ ಸಮಸ್ಯೆಯಿಂದಾಗಿ ಜನ ಸಾಕಷ್ಟು ತೊಂದರೆಗೀಡಾಗಿದ್ದಾರೆ. ಆಟೋ ಚಾಲಕರಂತು ಕಣ್ಣೀರಾಕುತ್ತಿದ್ದಾರೆ. ಸಚಿವ ಮುನಿಯಪ್ಪ ಅವರೊಂದಿಗೆ ಆಟೋ ಚಾಲಕರು ಮಾತನ್ನಾಡಿದ್ದಾರೆ. ತಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಈ ಸಂಬಂಧ ಕೆ ಹೆಚ್ ಮುನಿಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಕೆ ಹೆಚ್ ಮುನಿಯಪ್ಪ ಅವರು, ಪೆಟ್ರೋಲ್, ಡಿಸೇಲ್, ಎಲ್ಪಿಜಿ ಈ ತರದ್ದು ಏನೇನಿದೆ ಇದೆಲ್ಲವೂ ಕೇಂದ್ರ ಸರ್ಕಾರಕ್ಕೆ ಸಂಬಂಧಪಟ್ಟಿದ್ದು. ದೂರದೃಷ್ಟಿ ಇಲ್ಲದೆ, ಯುದ್ಧದ ಸೂಚನೆ ಇದ್ದರು ಕೂಡ, ಮುಂದಾಲೋಚನೆಯಲ್ಲಿ ಇದ್ಯಾವುದನ್ನು ಸರಿಪಡಿಸದೆ, ಕೇಂದ್ರ ಸರ್ಕಾರ ಈ ವಿಷಯದಲ್ಲಿ ವಿಫಲವಾಗಿದೆ. ರಷ್ಯಾದಲ್ಲಿ ಬೇರೆ ಬೇರೆ ಕಡೆ ಮಾತನ್ನಾಡಿ ತೆಗೆದುಕೊಳ್ಳುವ ನಿರ್ಧಾರವನ್ನು ಒಂದು – ಎರಡು ತಿಂಗಳು ಮೊದಲು ಪ್ಲ್ಯಾನ್ ಮಾಡಿಕೊಂಡಿದ್ದರೆ ಇವತ್ತು ಯಾರೂ ಕೂಡ ಕಷ್ಟಕ್ಕೆ ಸಿಲುಕುತ್ತಾ ಇರಲಿಲ್ಲ.

ಕಮರ್ಷಿಯಲ್ ಸಿಲಿಂಡರ್ ಬಹಳ ಮುಖ್ಯವಾಗಿದೆ. ಕಾರಣ ಇಷ್ಟೆ ಬೆಂಗಳೂರಂತ ನಗರದಲ್ಲಿ ಹೊಟೇಲ್ ಮಾಲೀಕರಿ, ಹೊಟೇಲ್ ಊಟದ ಮೇಲೆ ಅವಲಂಬಿತರಾಗಿರುವವರು, ಹೊರ ರಾಜ್ಯದಿಂದ ಬಂದಂತವರು 25-30% ಇದಾರೆ. ಹೊಟೇಲ್ ಗಳಿಗೆ ಗ್ಯಾಸ್ ನಿಲ್ಲಿಸಿಬಿಟ್ಟರೆ ಅವರು ಹೇಗೆ ಬದುಕ್ತಾರೆ. ಆದ್ರೂ ನಾವೂ ಇರಿವುದನ್ನೇ ಅಡ್ಜೆಸ್ಟ್ ಮಾಡಿ ಕೊಡುವಂತೆ ಮಾಡಿದ್ದೀನಿ. ಆದರೂ ಅದು ಸಾಕಾಗ್ತಾ ಇಲ್ಲ. ಆಟೋ ಸಿಲಿಂಡರ್ ಗ್ಯಾಸ್ ಕೂಡ ಬಹಳ ಮುಖ್ಯವಾಗಿ ಬೇಕಾಗಿದೆ. ಯಾಕಂದ್ರೆ ಅವರ ಜೀವನ ನಡೀತಾ ಇರೋದೆ ಅದರಿಂದ. ಅವರೆಲ್ಲಾ ನನ್ನನ್ನ ಭೇಟಿಯಾಗಿದ್ದರು. ನನಗೂ ಕಷ್ಟ ಅರ್ಥವಾಗಿದೆ. ಇದನ್ನ ಯಾರು ಸರಿ ಮಾಡಬೇಕು. ಕೇಂದ್ರ ಸರ್ಕಾರ ಉತ್ತರ ಭಾರತದಲ್ಲಿರುವ ರಾಜ್ಯಗಳಿಗೆ ಯಾವ ರೀತಿ ಸಪ್ಲೈ ಮಾಡ್ತಾ ಇದೆ, ಅದೇ ರೀತಿ ಕರ್ನಾಟಕಕ್ಕೂ ಕೊಡಬೇಕು ಎಂದು ಅನ್ಯಾಯದ ಬಗ್ಗೆ ಮಾತನ್ನಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...