ರೈತರಿಗೆ ಯುಗಾದಿ ಹಬ್ಬದ ಬೆನ್ನಲ್ಲೇ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನ ನೀಡಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡರದ ಸಚಿವ ಸಂಪುಟ ಸಭೆಯಲ್ಲಿ ರಸಗೊಬ್ಬರದ ಮೇಲೆ ಪೋಷಾಕಾಂಶ ಆಧಾರಿತ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಸಚಿವ ಸಂಪುಟ ಸಭೆಯಲ್ಲಿ ಫಾಸ್ಫೆಟಿಕ್ ಮತ್ತು ಪೊಟ್ಯಾಸಿಯಮ್ ರಸಗೊಬ್ಬರಗಳ ಮೇಲೆ ಖಾರಿಫ್ -2025 ಇಂದಿನಿಂದ ಅಂದರೆ 1-4-2025 ರಿಂದ ಐದು ತಿಂಗಳ ಕಾಲ ಅಂದರೆ 30-9-2025ರ ತನಕ ಪೋಷಕಾಂಶ ಆಧಾರಿತ ಸಬ್ಸಿಡಿ ದರಗಳಿಗೆ ಅನುಮೋದನೆ ನೀಡಿದೆ.

2025ರ ಖಾರಿಫ್ ಋತುವಿಗೆ ಪಿ ಮತ್ತು ಕೆ ರಸಗೊಬ್ಬರಗಳ ಮೇಲೆ ಪೋಷಾಕಾಂಶ ಆಧಾರಿತ ಸಬ್ಸಿಡಿ ದರಗಳನ್ನು ನಿಗದಿಪಡಿಸಲು ರಸಗೊಬ್ಬರ ಇಲಾಖೆಯು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿತ್ತು. ಇದಕ್ಕೆ ಒಪ್ಪಿಗೆ ನೀಡಲಾಗಿದೆ.2024ರ ಖಾರಿಫ್ ಋತುವಿಗೆ ಬಜೆಟ್ ಅವಶ್ಯಕತೆ ಸುಮಾರು 37,216,15 ಕೋಟಿ ರೂಪಾಯಿ ಇದೆ. 2024-25ರ ರಬಿ ಋತುವಿನ ಬಜೆಟ್ ಅಗತ್ಯಕ್ಕಿಂತ ಅಂದಾಜು 13 ಸಾವುರ ಕೋಟಿ ರೂಪಾಯಿ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ರಸಗೊಬ್ಬರ ಸಬ್ಸಿಡಿ ನೀಡುವುದರಿಂದ ಕಡಿಮೆ ದರದಲ್ಲಿ ಕೈಗೆಟಕುವ ಮತ್ತು ಸಮಂಜಸವಾದ ಬೆಲೆಯಲ್ಲಿ ರೈತರಿಗೆ ರಸಗೊಬ್ಬರ ಲಭ್ಯವಾಗಲಿದೆ. ರಸಗೊಬ್ಬರದ ಬೆಲೆ ಮತ್ತು ಅಂತರಾಷ್ಟ್ರೀಯ ಬೆಲೆಗಳಲ್ಲಿನ ಇತ್ತೀಚಿನ ಪ್ರವೃತ್ತಿಗಳನ್ನು ಗಮನದಲ್ಲಿಟ್ಟುಕೊಂಡು ಪಿ ಮತ್ತು ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ತರ್ಕಬದ್ಧಗೊಳಿಸುತ್ತದೆ. ಸರ್ಕಾರವು ರಸಗೊಬ್ಬರ ತಯಾರಕರು ಅಥವಾ ಆಮದುದಾರರ ಮೂಲಕ ರೈತರುಗೆ ಸಬ್ಸಿಡು ದರದಲ್ಲಿ 28 ದರ್ಜೆಯ ಪಿ ಮತ್ತು ಕೆ ರಸಗೊಬ್ಬರಗಳನ್ನು ಒದಗಿಸುತ್ತಿದೆ. ರೈತ ಸ್ನೇಹಿ ವಿಧಾನಕ್ಕೆ ಅನುಗುಣವಾಗಿ ರೈತರಿಗೆ ಕೈಗೆಟಕುವ ಬೆಲೆಯಲ್ಲಿ ರಸಗೊಬ್ಬರ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ.

