ಕುಮಾರಸ್ವಾಮಿಗೆ ಕೇಂದ್ರ ಬಿಜೆಪಿ ಬಿಗ್ ಆಫರ್.. ಒಕ್ಕಲಿಗರ ಮತ, ರೈತರ ಒಲೈಕೆಗೆ ಪ್ಲ್ಯಾನ್ ನಡಿತಿದ್ಯಾ..?

1 Min Read

 

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಬಹುಮತಗಳೊಂದಿಗೆ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಹಾಗೂ ಜೆಡಿಎಸ್ ನಿಂದ ಈ ಗೆಲುವನ್ನು ನಿರೀಕ್ಷೆ ಮಾಡಿರಲಿಲ್ಲ. ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲಿಸಲು ಮೈತ್ರಿ ಮೂಲಕ ಒಂದಾಗಿದ್ದಾರೆ. ಇದರ ನಡುವೆ ಕೇಂದ್ರ ಬಿಜೆಪಿಯಿಂದ ಕುಮಾರಸ್ವಾಮಿಗೆ ಬಿಗ್ ಆಫರ್ ಬಂದಿದೆಯಂತೆ.

 

ಲೋಕಸಭಾ ಚುನಾವಣೆ ಎದುರಿಸಲು ಮೈತ್ರಿ ಮೂಲಕ ಒಂದಾಗಿದೆ. ಈಗಾಗಲೇ ಜೆಡಿಎಸ್ ಗೆ ಎಲ್ಲೆಲ್ಲಾ ಕ್ಷೇತ್ರಗಳನ್ನು ಬಿಟ್ಟುಕೊಡಬಹುದು ಎಂಬುದನ್ನು ಚರ್ಚೆ ಮಾಡಿರುವ ಬಿಜೆಪಿ, ಕುಮಾರಸ್ವಾಮಿ ಅವರಿಗೆ ಸಚಿವ ಸಂಪುಟದಲ್ಲೂ ಅವಕಾಶ ನೀಡಲು ನಿರ್ಧರಿಸಿದೆಯಂತೆ. ಸಂಕ್ರಾಂತಿ ಬಳಿಕ ಕೇಂದ್ರ ಸಚಿವ ಸಂಪುಟ ರಿ ಶಫಲ್ ಆಗಲಿದೆ. ಈ ವೇಳೆ ಕುನಾರಸ್ವಾಮಿ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಕೇಂದ್ರ ಸರ್ಕಾರ ಸಚಿವ ಸಂಪುಟದಲ್ಲಿ ಕುಮಾರಸ್ವಾಮಿಗೆ ಸ್ಥಾನ ನೀಡುತ್ತಿರುವುದರ ಹಿಂದೆ ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ಒಕ್ಕಲಿಗ ಮತಗಳನ್ನು ಸೆಳೆಯುವ ತಂತ್ರ ಅಡಗಿದೆ ಎನ್ನಲಾಗಿದೆ. ಜೊತೆಗೆ ಕೃಷಿ ಖಾತೆ ನೀಡುವ ಸಂಭವವಿದ್ದು, ರೈತರನ್ನು ಒಲೈಕೆ ಮಾಡುವ ತಂತ್ರ ಅಡಗಿದೆ ಎನ್ನಲಾಗಿದೆ. ಇದರ ಜೊತೆಗೆ ಡಿಕೆಶಿಗೆ ಟಕ್ಕರ್ ಕೊಡಲು ಮುಂದಾಗಿದೆ ಎನ್ನಲಾಗುತ್ತಿದೆ.

ಕೇಂದ್ರ ಸಚುವ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂಬ ಚರ್ಚೆಯ ಬೆನ್ನಲ್ಲೇ ಸಿ ಟಿ ರವಿ, ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ. ಬಿಡದಿಯ ತೋಟದ ಮನೆಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *