ಬೆಂಗಳೂರು: ಐರಾ ಯಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇನ್ನು ಮೂರು ವರ್ಷಕ್ಕೆ ಐರಾ ಫ್ಯಾನ್ ಫಾಲೋವರ್ಸ್ ನ ಹೊಂದಿದ್ದಾಳೆ. ಎಷ್ಟೇ ಆಗ್ಲಿ ಸ್ಟಾರ್ ಕಿಡ್ ಅಲ್ವೆ. ರಾಧಿಕಾ ಪಂಡಿತ್ ಮಗಳಿಗೆ ವಿಶ್ ಮಾಡಿ ಪೋಸ್ಟ್ ಒಂದನ್ನ ಮಾಡಿದ್ದಾರೆ.
ಯಶ್ ಫ್ಯಾನ್ಸ್ ಎಲ್ಲಾ ಈಗ ಐರಾಗೂ ಫ್ಯಾನ್ಸ್ ಆಗಿ ಬಿಟ್ಟಿದ್ದಾರೆ. ಯಾಕಂದ್ರೆ ರಾಧಿಕಾ ಪಂಡಿತ್ ಐರಾಳ ಆಟ ತುಂಟಾಟದ ವಿಡಿಯೋಗಳನ್ನೆಲ್ಲಾ ಹಾಕಿ, ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದ್ದಾರೆ. ಇತ್ತೀಚೆಗೆ ಐರಾಳ ವಿಡಿಯೋ ಸ್ವಲ್ಪ ಕಡಿಮೆಯಾಗಿದೆ. ಹೀಗಾಗಿ ಅಭಿಮಾನಿಗಳಿಗೆ ಕ್ಯೂರಿಯಾಸಿಟಿ. ಅಷ್ಟು ಮುದ್ದು ಮುದ್ದಾಗಿ ಮಾತಾಡ್ತಿದ್ದ ಐರಾ ಈಗ ಹೇಗೆ ಮಾತಾಡ್ತಾ ಇರಬಹುದು ಅಂತ.
ಜೊತೆಗೆ ಮನೆಯಲ್ಲೆ ತಮ್ಮ ಬೇರೆ ಇದ್ದಾನೆ. ಇಬ್ಬರ ಟೈಪಾಸ್ ಸಖತ್ತಾಗೆ ಇರುತ್ತೆ. ಕಿತ್ತಾಡಿಕೊಂಡು, ಮುದ್ದಾಡಿಕೊಂಡು ಕಾಲ ಕಳೆಯುತ್ತಾ ಇರ್ತಾರೆ. ರಾಧಿಕಾ ಪಂಡಿತ್ ಕೂಡ ಮದುವೆಯಾದ ಮೇಲೆ ಮಕ್ಕಳು, ಮಕ್ಕಳ ಹಾರೈಕೆಯಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ.
ಮಗಳ ಕೈ ಹಿಡಿದುಕೊಂಡು ಹೋಗುತ್ತಿರುವ ಫೋಟೋ ಹಾಕಿ, ಕಾಣಬಹುದಾಗಿದೆ. ನಿನ್ನ ಕೈ ಹಿಡಿಯಲು ಸದಾ ಯಾವಾಗಲೂ ನಿನ್ನೊಂದಿಗೆ ಇರುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು ಎಂಜೆಲ್ ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.