ದುರ್ಗೋತ್ಸವ ಆಚರಿಸಿ : ಕರುನಾಡ ವಿಜಯಸೇನೆ ಒತ್ತಾಯ

1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜೂನ್. 20 : : ದುರ್ಗೋತ್ಸವ ಆಚರಿಸದೆ ಐತಿಹಾಸಿಕ ಚಿತ್ರದುರ್ಗವನ್ನು ಕಡೆಗಣಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಕರುನಾಡ ವಿಜಯಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.

ರಾಜಮಹಾರಾಜರು, ವೀರವನಿತೆ ಒನಕೆ ಓಬವ್ವ ಆಳಿದಂತ ಚಿತ್ರದುರ್ಗದ ಏಳುಸುತ್ತಿನ ಕೋಟೆಯಲ್ಲಿ ಇಲ್ಲಿಯವರೆಗೂ ಮೂರು ಬಾರಿ ಮಾತ್ರ ದುರ್ಗೋತ್ಸವ ಆಚರಿಸಲಾಗಿದೆ. ಅನೇಕ ಸಾರಿ ಸರ್ಕಾರದ ಮೇಲೆ ಒತ್ತಡ ಹೇರಿದ್ದರೂ ಸ್ಪಂದಿಸುತ್ತಿಲ್ಲ. ದೇಶ-ವಿದೇಶಗಳಿಂದ ಪ್ರವಾಸಿಗರು ಚಿತ್ರದುರ್ಗಕ್ಕೆ ಆಗಮಿಸಿ ಕೋಟೆ ವೀಕ್ಷಿಸುತ್ತಾರೆ. ಜೋಗಿಮಟ್ಟಿ, ಚಂದ್ರವಳ್ಳಿ, ಆಡುಮಲ್ಲೇಶ್ವರ, ದವಳಪ್ಪನಗುಡ್ಡ, ಮುರುಘಾಮಠ ಹೀಗೆ ಜಿಲ್ಲೆ ಅನೇಕ ಪ್ರವಾಸಿ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಹಂಪಿ ಉತ್ಸವದಂತೆ ಪ್ರತಿ ವರ್ಷವೂ ದುರ್ಗೋತ್ಸವ ಆಚರಿಸಿದರೆ ಚಿತ್ರದುರ್ಗದ ಇತಿಹಾಸವನ್ನು ಇಂದಿನ ಪೀಳಿಗೆಗೆ ಪರಿಚಯಿಸಿದಂತಾಗುತ್ತದೆ ಎಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ದುರ್ಗೋತ್ಸವ ಆಚರಿಸುವಂತೆ ಐದಾರು ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜೂನ್ ಅಂತ್ಯದೊಳಗೆ ಆಚರಿಸುವುದಾಗಿ ಭರವಸೆ ನೀಡಿದ್ದಾರೆ. ಹುಸಿಯಾಗಬಾರದು. ದುರ್ಗೋತ್ಸವ ಆಚರಿಸಿ ರಾಜಾವೀರಮದಕರಿನಾಯಕರಿಗೆ ಹಾಗು ಒನಕೆ ಓಬವ್ವಳಿಗೆ ಗೌರವ ಸಲ್ಲಿಸಬೇಕೆಂಬುದು ನಮ್ಮ ಆಸೆ ಎಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಆಗ್ರಹಿಸಿದರು.

 

ಕರುನಾಡ ವಿಜಯಸೇನೆ ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ಉಪಾಧ್ಯಕ್ಷೆ ರತ್ನಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಉಪಾಧ್ಯಕ್ಷ ಮುಜಾಯಿದ್
ಕಾರ್ಯದರ್ಶಿ ಅಣ್ಣಪ್ಪ, ಜಗದೀಶ್, ನಗರಾಧ್ಯಕ್ಷ ಅವಿನಾಶ್, ಹರೀಶ್‍ಕುಮಾರ್, ವಿಜಯಬಾಬು, ನಿಸಾರ್‍ಅಹಮದ್, ತಿಪ್ಪೇಸ್ವಾಮಿ, ಶಶಿಧರ, ಕಮಲಮ್ಮ, ಮಧುಸೂದನ್
ನಾಗೇಶ್, ಸುರೇಶ್ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *