ಚರಂಡಿಯಲ್ಲಿ ಬಿದ್ದು ಬಾಲಕ ಸಾವು ಎಂದು ಕೊಂಡಿದ್ದವರಿಗೆ ಸಿಸಿಟಿವಿಯಲ್ಲಿ ಸತ್ಯ ಬಯಲು : ಬಾಗಲಕೋಟೆಯಲ್ಲಿ ಆಗಿದ್ದೇನು..?

suddionenews
1 Min Read

ಬಾಗಲಕೋಟೆ: ದಾರಿಯಲ್ಲಿ ಅವನ ಪಾಡಿಗೆ ಅವನು ಹೋಗುತ್ತಿದ್ದಾಗ ಗೋಡೆಗೆ ತಾಗಿ ನಿಲ್ಲಿಸಿದ ಕಬ್ಬಿಣದ ಗೇಟ್ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಕಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿದೆ. 8 ವರ್ಷದ ರಂಜಿತ್ ಸೂರಗೊಂಡ ಸಾವನ್ನಪ್ಪಿದ ಬಾಲಕ.

ಕಳೆದ ತಿಂಗಳು 31ರಂದು ಈ ಘಟನೆ ನಡೆದಿದೆ. ಚರಂಡಿಯಲ್ಲಿ ಬಿದ್ದು ಬಾಲಕ ಸಾವನ್ನಪ್ಪಿದ್ದ ಎಂದೇ ಗ್ರಾಮಸ್ಥರು ನಂಬಿದ್ದರು. ಆದರೆ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ನಿಜವಾದ ಘಟನೆ ಬೆಳಕಿಗೆ ಬಂದಿದೆ. ಕಬ್ಬಿಣದ ಗೇಟ್ ಇದ್ದ ಮನೆಯ ಎದುರಗಡೆಯ ಬಸವೇಶ್ವರ ಸಮುದಾಯದ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಯಿಂದ ಈ ಘಟನೆ ಬೆಳಕಿಗೆ ಬಂದಿದೆ.

ರಂಜಿತ್ ತನ್ನ ಪಾಡಿಗೆ ತಾನು ದಾರಿಯಲ್ಲಿ ಹೋಗುತ್ತಿದ್ದ. ಮನೆಯ ಮುಂಭಾಗ ನಿಲ್ಲಿಸಿದ್ದ ಗೇಟ್ ಅಟಾತ್ ಆಗಿ ರಂಜಿತ್ ಮೇಲೆ ಬಿದ್ದಿದೆ. ಕಬ್ಬಿಣದ ಗೇಟ್ ಬಾರವಿದ್ದ ಕಾರಣ, ಬಾಲಕ ಚರಂಡಿ ಒಳಗೆ ಬಿದ್ದಿದ್ದಾನೆ. ಅಲ್ಲಿಯೆ ಸಾವನ್ನಪ್ಪಿದ್ದಾನೆ. ಬಾಲಕನ ಶವ ಚರಂಡಿಯಲ್ಲಿ ಸಿಕ್ಕ ಕಾರಣ ಎಲ್ಲರೂ ಆತ ಚರಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದ ಎಂದುಕೊಂಡಿದ್ದರು. ಆದರೆ ಸಿಸಿಟಿವಿಯಿಂದ ಸತ್ಯ ಬಯಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *