ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಆಗಾಗ ಇಡಿ ನೋಟೀಸ್ ಬರುತ್ತಾನೆ ಇರುತ್ತೆ. ಇತ್ತಿಚೆಗಷ್ಟೇ ಭಾರತ್ ಜೋಡೋ ಯಾತ್ರೆ ನಡೆಯುವ ನಡುವೆ ಡಿಕೆ ಸುರೇಶ್ ಹಾಗೂ ಡಿಕೆ ಶಿವಕುಮಾರ್ ದೆಹಲಿಗೆ ಹೋಗಿ ವಿಚಾರಣೆಗೆ ಹಾಜರಾಗಿ ಬಂದಿದ್ದರು. ಇದೀಗ ಪ್ರಜಾಧ್ವನಿ ಯಾತ್ರೆಯ ವೇಳಯೂ ಮತ್ತೆ ನೋಟೀಸ್ ಬಂದಿದೆ. ಅದು ಈ ಬಾರಿ ಮಗಳು ಐಶ್ವರ್ಯಾಗೂ ನೋಟೀಸ್ ಜಾರಿ ಮಾಡಿದೆ. ಫೆಬ್ರವರಿ 26ರಂದು ವಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಈ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, ಸಿಬಿಐ ದುರ್ಬಳಕೆಯಾಗುತ್ತಾ ಇದೆ. ಸಿಬಿಐ ಅನ್ನೋದು ಒಂದು ದೊಡ್ಡ ತನಿಖಾ ಸಂಸ್ಥೆ. ಆದ್ರೆ ಸಿಬಿಐ ತನ್ನ ಮಗಳ ವಿದ್ಯಾಭ್ಯಾಸದ ಬಗ್ಗೆ ಕೇಳ್ತಾ ಇದ್ದಾರೆ. ಪುತ್ರಿ ಏನು ಓದಿದ್ದಾರೆ. ಫೀಸ್ ಕಟ್ಟಿದ್ರಾ ಎಂಬ ಪ್ರಶ್ನೆಗಳನ್ನು ಕೇಳಿ ಸಿಬಿಐ ನೋಟೀಸ್ ನೀಡಿದೆ. ಫೆಬ್ರವರಿ 26ರಂದು ವಿಚಾರಣೆಗೆ ಹಾಜರಿಯಾಗಬೇಕು ಎಂದಿದ್ದಾರೆ.
ಅಲ್ಲ ನಾವೇ ಒಂದು ಶಿಕ್ಷಣ ಸಂಸ್ಥೆ ನಡೆಸುತ್ತಾ ಇರೋರು. ಫೀಸ್ ಕಟ್ಟಲ್ವಾ. ನಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆಯೂ ಪ್ರಶ್ನೆ ಮಾಡ್ತಾರೆ. ನಮ್ಮ ಮಕ್ಕಳ ಸ್ಕೂಲ್ ಬಗ್ಗೆಯೂ ಪ್ರಶ್ನೆ ಮಾಡ್ತಾರೆ ಅಂದ್ರೆ ಸಿಬಿಐಗೆ ಯಾರು ಅಡ್ವೈಸ್ ಮಾಡ್ತಿದ್ದಾರೆ ಗೊತ್ತಿಲ್ಲ. ನಾನೇ ಅವರಿಗೆ ಒಂದು ಪತ್ರ ಬರೆಯಬೇಕು ಅಂದುಕೊಂಡಿದ್ದೀನಿ. ನಿಮಗೆ ಬೇಕಾದಷ್ಟು ಕೆಲಸ ಇದೆ. ದೊಡ್ಡ ಮಟ್ಟದ ಕೆಲಸಗಳು ಇರುತ್ತವೆ ಇಂಥ ಕೆಲಸ ಮಾಡಬೇಡಿ ಎಂದು ಪತ್ರದಲ್ಲಿ ತಿಳಿಸುತ್ತೇನೆ ಎಂದಿದ್ದಾರೆ.