ರೈತರ ಪ್ರತಿಭಟನೆಯ ನಡುವೆಯೂ ತಮಿಳುನಾಡಿಗೆ ಇಂದು ಕಾವೇರಿ ನೀರು ಬಿಡುಗಡೆ..!

1 Min Read

 

 

ಮಂಡ್ಯ: ರಾಜ್ಯದಲ್ಲಿಯೇ ಮಳೆ ಕೊರತೆ ಜಾಸ್ತಿ ಇದೆ. ಡ್ಯಾಂಗಳಲ್ಲಿ ಇರುವ ನೀರು ಬತ್ತುತ್ತಾ ಇದೆ. ಹೀಗೆ ಆದರೆ ನಮ್ಮಗಳ ಕಥೆ ಏನು..? ಕುಡಿಯುವುದಕ್ಕೂ ನೀರು ಇರುವುದಿಲ್ಲ ಎಂಬ ಚಿಂತೆಯಲ್ಲಿ ರೈತರಿದ್ದಾರೆ. ಇದರ ನಡುವೆ ತಮಿಳುನಾಡು ತನ್ನ ಪಾಲಿನ ನೀರನ್ನು ಪಡೆಯುತ್ತಲೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಸುಪ್ರೀಂ ಕೋರ್ಟ್ ಸೂಚನೆಯಂತೆ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿರುವುದಾದರೂ ಮೊದಲು ನಮ್ಮ ರಾಜ್ಯದ ಪರಿಸ್ಥಿತಿ ನೋಡಬೇಕು ಅನ್ನೋದು ರೈತರ ಅಭಿಪ್ರಾಯ. ತಮಿಳುನಾಡಿಗೆ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ, ಬಿಜೆಪಿಯ ಸಂಸದರು ಕೂಡ ನಿನ್ನೆಯೆಲ್ಲಾ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆಯಂತು ಮುಂದುವರೆದಿದೆ.

ಆದರೂ ರೈತರ ಪ್ರತಿಭಟನೆಯ ನಡುವೆಯೂ ಕೆಆರ್ಎಸ್ ನಿಂದ ಇಂದು ತಮಿಳುನಾಡಿಗೆ, 10.841 ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ನಿನ್ನೆ 12,631 ಕ್ಯೂಸೆಕ್ ನೀರು ಬಿಡಲಾಗಿತ್ತು. ನಿನ್ನೆಗಿಂತ ಎರಡು ಕ್ಯೂಸೆಕ್ ನೀರನ್ನು ಕಡಿಮೆ ಮಾಡಲಾಗಿದೆ. ಆದರೆ ದಿನೇ ದಿನೇ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾದರೂ ರಾಜ್ಯ ಸರ್ಕಾರದ ಈ ನಡೆಗೆ ಮಂಡ್ಯ, ಮೈಸೂರು ಭಾಗದ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಆರ್​ಎಸ್​ ಡ್ಯಾಂನ ನೀರಿನ ಮಟ್ಟ 104 ಅಡಿಗೆ ಕುಸಿತ ಕಂಡಿದ್ದು, ಒಂದೇ ದಿನಕ್ಕೆ ನೀರಿನ ಪ್ರಮಾಣ ಒಂದು ಅಡಿಯಷ್ಟು ಕೆಳಸ್ಥರದಲ್ಲಿ ಕಂಡಿದೆ. ಹೀಗಾಗಿ ಕಾವೇರಿ ಕೊಳ್ಳದ ರೈತರಲ್ಲಿ ಆತಂಕ ಹೆಚ್ಚಾಗಿದೆ. 5269 ಕ್ಯೂಸೆಕ್ ನೀರು ಮಾತ್ರ ಹರಿದು ಬರುತ್ತಿದೆ . 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ 104.90 ಅಡಿ ನೀರು ಸಂಗ್ರಹವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *