ಬೆಂಗಳೂರು: ಚುನಾವಣೆಯಲ್ಲಿ ಜಾತಿವಾರು ಲೆಕ್ಕಚಾರವೇ ಬಹಳ ಮುಖ್ಯವಾಗಿರುತ್ತದೆ. ಜಾತಿ ಆಧಾರದ ಮೇಲೆಯೇ ಚುಮಾವಣೆಯಲ್ಲೂ ವರ್ಕೌಟ್ ಆಗುವುದು. ಹೀಗಾಗಿ ಕಾಂಗ್ರೆಸ್ ಕೂಡ ಎರಡನೇ ಪಟ್ಟಿಯನ್ನು ಜಾತಿ ಆಧಾರದ ಮೇಲೆಯೇ ನೀಡಿದೆ. ಅದರ ಪಟ್ಟಿ ಈ ರೀತಿ ಇದೆ.
ಈಗಾಗಲೇ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ 124 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಿದ್ದ ಕಾಂಗ್ರೆಸ್ ಇಂದು 58 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಒಟ್ಟು 166 ಅಭ್ಯರ್ಥಿಗಳಿಗೆ ಕ್ಷೇತ್ರ ನಿಗದಿ ಮಾಡಿದೆ. ಅದರಲ್ಲಿ ಜಾತಿವಾರು ಲೆಕ್ಕಚಾರ ಇಲ್ಲಿದೆ.
ಲಿಂಗಾಯತ 40, ಒಕ್ಕಲಿಗ 35, ವಾಲ್ಮೀಕಿ 12, ಕುರುಬ 8, ಮುಸ್ಲಿಂ 11, SC ಬಲ – 14, SC ಎಡ – 6, ಭೋವಿ 3, ಲಂಬಾಣಿ 4, ಈಡಿಗ 7, ಬಂಟ್ಸ್ 4, ಮರಾಠ 5, ಬ್ರಾಹ್ಮಣ 7 ಹೀಗೆ ಎಲ್ಲಾ ಜಾತಿಗೂ ಟಿಕೆಟ್ ಹಂಚಿಕೆ ಮಾಡಿದೆ. ಅದರಲ್ಲೂ ಹೆಚ್ಚಿನದಾಗಿ ಈ ಬಾರಿ ಲಿಂಗಾಯತರಿಗೆ ಟಿಕೆಟ್ ಸಿಕ್ಕಿದೆ.