ಜಾತಿ ಗಣತಿ ಸಮೀಕ್ಷೆಯಲ್ಲಿ ಕಾಡುಗೊಲ್ಲರು ಎಂದು ಬರೆಸಿ : ಶಿವಣ್ಣ ಮನವಿ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಸೆ.17 : ರಾಜ್ಯ ಸರ್ಕಾರ ಕೈಗೊಂಡಿರುವ ಜಾತಿ ಗಣತಿ ಸಮೀಕ್ಷೆಯಲ್ಲಿ ಜಾತಿ ಕಾಲಂನಲ್ಲಿ ಕಾಡುಗೊಲ್ಲರು ಎಂದು ಬರೆಸಬೇಕೆಂದು ಸಮಾಜದ ಮುಖಂಡರು, ಗ್ಯಾರೆಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಶಿವಣ್ಣ ಸಮುದಾಯವರಲ್ಲಿ ಮನವಿ ಮಾಡಿದ್ದಾರೆ.

ಅವರು ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು. ಸರ್ಕಾರ ಸೆ. 22 ರಿಂದ ಜಾತಿ ಗಣತಿ ಸಮೀಕ್ಷೆ ನಡೆಸುತ್ತಿದ್ದು ಪ್ರತಿಯೊಂದು ಹಳ್ಳಿಗಳಿಗೂ ಸಮೀಕ್ಷೆದಾರರು ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾಡುಗೊಲ್ಲ ಸಮುದಾಯ ಬೆಳಗಾವಿಯಿಂದ ಬೆಂಗಳೂರು ಚಾಮರಾಜನಗರ ಇಡೀ ಕರ್ನಾಟಕ ರಾಜ್ಯಾದ್ಯಂತ ಒಂದೇ ತೀರ್ಮಾನಕ್ಕೆ ಬಂದಿದ್ದು  ಕಾಡುಗೊಲ್ಲ ಸಮುದಾಯ ಇದುವರೆಗೂ ಅನೇಕ ಉಪಜಾತಿಗಳನ್ನು ಇಟ್ಟುಕೊಂಡು ಬಂದರು ಇದೀಗ ನಮಗೇ ಅವಶ್ಯಕತೆ ಇರುವುದು ಸಮೀಕ್ಷೆಯಲ್ಲಿ ಕಾಡುಗೊಲ್ಲ ಎಂದು ಕಾಲಂನಲ್ಲಿ ಎಲ್ಲರು ಬರೆಸಬೇಕು ಎಂದಿದ್ದಾರೆ.

ಕಾಡು ಗೊಲ್ಲರ ಕುಲ ಕಸಬು ಕುರಿ ಮೇಕೆ ಹಸುಗಳನ್ನು ಸಾಕಿಕೊಂಡು ಗುಡ್ಡಗಾಡು ಪ್ರದೇಶಗಳಲ್ಲಿ ಅತೀ ಕಷ್ಟದ ಪರಿಸ್ಥಿತಿಯಲ್ಲಿ ಜೀವನ  ನಡೆಸುತ್ತಿದ್ದಾರೆ. ಹಟ್ಟಿಗಳಿಗೆ ರಸ್ತೆಗಳಿಲ್ಲ. ಮೂಲಭೂತ ಸೌಕರ್ಯಗಳಿಲ್ಲ. ಕಾಡುಗೊಲ್ಲರು ಶಿಕ್ಷಣದಿಂದ ವಂಚಿತರಾಗಿದ್ದಾರೆ . ಆರ್ಥಿಕವಾಗಿ ರಾಜಕೀಯವಾಗಿ ಹಿಂದುಳಿದಿದ್ದಾರೆ. ಕಾಡುಗೊಲ್ಲ ಜನಾಂಗದ ಮುಂದಿನ ಪೀಳೆಗೆಗಾಗಿ ಹಾಗೂ ಮುಂದೆ ಬರುವಂತಹ ಮಕ್ಕಳ ಭವಿಷ್ಯಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ.ಕಾಡು ಗೊಲ್ಲರ ಹಟ್ಟಿಗಳಿಗೆ ಸಮೀಕ್ಷೆಗೆ ಬಂದ ಸಂದರ್ಭದಲ್ಲಿ ಕಾಡುಗೊಲ್ಲರು ಜಾತಿ ಕಾಲಂ ನಲ್ಲಿ ಕಾಡುಗೊಲ್ಲರು ಎಂದೇ ಬರೆಯಿಸಿ ಎಂದು ತಿಳಿಸಿದರು.

ಮಾಜಿ ಶಾಸಕ ಎ.ವಿ. ಉಮಾಪತಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಕಾಡುಗೊಲ್ಲರ ಕುಲ ಶಾಸ್ತ್ರ ಅದ್ಯಯನ ನಡೆಸಿ ಕಾಡು ಗೊಲ್ಲರನ್ನು ಎಸ್.ಟಿ. ಜಾತಿ ಪಟ್ಟಿಗೆ ಸೇರಿಸಬೇಕೆಂದು ಕೇಂದ್ರಕ್ಕೆ ಶಿಪಾರಸ್ಸು ಮಾಡಿದೆ. ಕಾಡುಗೊಲ್ಲರ ಹಟ್ಟಿಗಳಲ್ಲಿ ಇಂದಿಗೂ ಮೂಲಭೂತ ಸೌಕರ್ಯಗಳು ಇಲ್ಲ ಆಸ್ಪತ್ರೆಗಳು, ಶಾಲೆಗಳು ಇಲ್ಲ ಕಾಡುಗೊಲ್ಲರು ಎಲ್ಲದರಲ್ಲೂ ಹಿಂದುಳಿದಿದ್ದಾರೆ ಹೀಗಾಗಿ ಸರಕಾರ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಡಿದೆ ಕಾಡುಗೊಲ್ಲರು ಇಡೀ ರಾಜ್ಯದ್ಯಂತ ಎಲ್ಲ ಸೌಲಭ್ಯಗಳಲ್ಲೂ ವಂಚಿತರಾಗಿದ್ದಾರೆ ಮೈಸೂರು ಮಹಾರಾಜರ ಕಾಲದಲ್ಲಿಯೇ ಕಾಡುಗೊಲ್ಲರು ಎಂದು ನಮೂದಾಗಿದೆ  ಕರ್ನಾಟಕ ರಾಜ್ಯಾದ್ಯಂತ ಎಲ್ಲ ಕಡೆಗಳಲ್ಲಿ ಕಾಡು ಗೊಲ್ಲರು ವಾಸಿಸುತ್ತಿದ್ದಾರೆ. ನಾವೇಲ್ಲರೂ ಇಂದಿನಿಂದ ಹಟ್ಟಿಗಳಿಗೆ ಹೋಗಿ ಜಾತಿ ಕಾಲಂನಲ್ಲಿ ಕಾಡು ಗೊಲ್ಲರು ಎಂದು ಬರೆಯಿಸಿ ಎಂದು ಇವತ್ತಿನಿಂದಲೇ ಮಾಹಿತಿ ನೀಡಿ ಹಳ್ಳಿಗಳಿಗೆ ಬೇಟಿ ನೀಡಿ ಜಾಗೃತಿಮೂಡಿಸುತ್ತೇವೆ  ಯುವಕರು ಸಹ ಜಾತಿ ಕಾಲಂನಲ್ಲಿ ಕಾಡು ಗೊಲ್ಲರು  ಎಂದು ಬರೆಯಿಸಿ ಎಂದು ಜಾಗೃತಿ ಮೂಡಿಸಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಿತ್ರದುರ್ಗ ತಾ.ಪಂ. ಮಾಜಿ ಅಧ್ಯಕ್ಷರಾದ ಆನಂದ್, ಕಸಾಪದ ಮಾಜಿ ಆದ್ಯಕ್ಷರಾದ ದೊಡ್ಡಮಲ್ಲಯ್ಯ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ರಮೇಶ್, ನಗರಸಭೆಯ ಮಾಜಿ ಆಧ್ಯಕ್ಷರಾದ ಸಿ.ಟಿ.ಕೃಷ್ಣಮೂರ್ತಿ, ರಂಗಸ್ವಾಮಿ, ತಿಮ್ಮಣ್ಣ, ರಾಮಣ್ಣ, ಸೇರಿದಂತೆ ಇನ್ನು ಅನೇಕ ಸಮಾಜದ ಮುಖಂಡರುಗಳು ಇದ್ದರು.

Share This Article
Enable Notifications OK No thanks