ಜಾತಿ ಗಣತಿ ವರದಿ : ಸಿದ್ದಗಂಗಾ ಶ್ರೀಗಳು ಹೇಳಿದ್ದೇನು..?

1 Min Read

 

ತುಮಕೂರು : ನಿನ್ನೆಯಷ್ಟೇ ಜಾತಿ ಗಣತಿ ವರದಿಯನ್ನು ಜಯಪ್ರಕಾಶ್ ಹೆಗ್ಡೆ ಅವರು ಸರ್ಕಾರಕ್ಕೆ ಒಪ್ಪಿಸಿದ್ದಾರೆ. ಹಲವರು ಒಪ್ಪಿಕೊಂಡರೆ ಇನ್ನು ಹಲವರು ಆ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಸಿದ್ದಗಂಗಾ ಶ್ರೀಗಳು ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

ಜಾತಿ ಗಣತಿ ವರದಿ ಬಗ್ಗೆ ಮಾತನಾಡಿರುವ ಶ್ರೀಗಳು, ಜಾತಿ ಗಣತಿ ವಿಚಾರದಲ್ಲಿ ಎಲ್ಲರನ್ನು ಸಂದರ್ಶನ ಮಾಡಿ ಬರೆದಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನನ್ನಂತೂ ಯಾರೂ ಸಂಪರ್ಕ ಮಾಡಿಲ್ಲ. ನಾನ್ಯಾವ ಜಾತಿ, ಏನು ಅಂತ ಯಾವ ಮಾಹಿತಿಯನ್ನು ಯಾರೂ ಕೇಳಲಿಲ್ಲ. ಎಲ್ಲರನ್ನು ಕೇಳಿ, ಪ್ರತಿಯೊಬ್ಬರನ್ನು ಮಾತನಾಡಿಸಿ ವರದಿ ಮಾಡಿದರೆ ಸೂಕ್ತವಿತ್ತು. ಎಲ್ಲರಿಗೂ ಸೌಲಭ್ಯ ಲಭ್ಯವಾಗುವ ರೀತಿ ಮಾಡಿದರೆ ಉತ್ತಮವಾಗಿರುತ್ತದೆ. ಎಲ್ಲರ ಬಳಿಯೂ ಹೋಗಿದ್ದೇ ಅಂತಾರಲ್ಲ ನನ್ನ ಬಳಿ ಅಂತೂ ಬಂದಿಲ್ಲ. ಪ್ರತಿಯೊಬ್ಬರನ್ನು ಕೇಳುತ್ತಾರಾ..? ಅಥವಾ ಸಮಾಜದ ಮುಖಂಡರನ್ನು ಮಾತ್ರ ಕೇಳುತ್ತಾರಾ..? ಏನು ಎಂಬುದು ಮಾತ್ರ ಗೊತ್ತಿಲ್ಲ. ಹಾಗಾಗಿ ನಾನು ಅದರ ಬಗ್ಗೆ ಮಾತನಾಡುವುದಕ್ಕೆ ಹೋಗಲ್ಲ. ಎಲ್ಲರನ್ನು ಒಳಗೊಂಡಂತೆ ವರದಿ ಮಾಡಿದರೆ ಉತ್ತಮ. ಹಾಗೇ ಆಯಾ ಜಾತಿಯ ಆಧಾರದ ಮೇಲೆ‌ಸೌಲಭ್ಯಗಳು ವಿತರಣೆಯಾಗಲಿ ಎಂದು ಹೇಳಿದ್ದಾರೆ.

ಜಾತಿ ಗಣತಿ ವರದಿಯ ವಿಚಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ವರದಿ ಅವೈಜ್ಞಾನಿಕವಾಗಿದೆ ಎಂದೇ ವಿರೋಧ ವ್ಯಕ್ತಪಡಿಸುತ್ತಿದ್ದರು. ಎಲ್ಲರನ್ನು ಕೇಳಿ ಮತ್ತೆ ವರದಿಯನ್ನು ತಯಾರಿಸಿ ಎಂದೇ ಅಭಿಪ್ರಾಯಗಳು ಕೇಳಿ ಬಂದಿತ್ತು. ಇದೀಗ ಸಿದ್ದಗಂಗಾ ಸ್ವಾಮೀಜಿಗಳು ನೀಡಿರುವ ಹೇಳಿಕೆ ಶಾಕ್ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *