ಬೆಂಗಳೂರು: ಬಿಹಾರದಲ್ಲಿ ಜಾತಿ ಗಣತಿ ವರದಿ ಬಿಡುಗಡೆಯಾದಾಗಿನಿಂದ ರಾಜ್ಯದಲ್ಲೂ ಜಾತಿಗಣತಿ ವರದಿಗೆ ಸಾಕಷ್ಟು ಪರ ವಿರೋಧ ಶುರುವಾಗಿದೆ. ಮತ್ತೆ ಮುನ್ನೆಲೆಗೆ ಬಂದಿರುವ ಜಾತಿಗಣತಿ ವರದಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂತರಾಜು ವರದಿಯೇ ಮಿಸ್ ಆಗಿದೆ ಎಂದೇ ಹೇಳಲಾಗುತ್ತಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ.
ಕಮಿಷನ್ ಸೆಕ್ರೆಟರಿನ ನಾನು. ಮಿಸ್ ಆಗಿರುವುದನ್ನ ಹೇಳಿದ್ದು ಯಾರು..? ನಂಗಂತು ಗೊತ್ತಿಲ್ಲ. ಒಂದು ದಿನ ನನ್ನ ಭೇಟಿ ಮಾಡಿದ್ರು. ಒಂದು ತಿಂಗಳು ಎರಡು ತಿಂಗಳು ಹೆಚ್ಚು ಕಡಿಮೆ ಆಗುತ್ತೆ ಎಂದು ಹೇಳಿದ್ದಾರೆ. ಡಿಸೆಂಬರ್ ಅಥವಾ ಜನವರಿ ಒಳಗೆ ಕೊಡುತ್ತೀವಿ ಎಂದಿದ್ದಾರೆ. ನಾನಿನ್ನೂ ವರದಿಯನ್ನೇ ನೋಡಿಲ್ಲ. ವರದಿಯನ್ನು ಕೊಟ್ಟ ಮೇಲೆ ನೋಡೋಣಾ. ವರದಿ ಬಂದ ಮೇಲೆ ಚರ್ಚೆ ಮಾಡೋಣಾ. ಅದಕ್ಕೂ ಮೊದಲೇ ವಿರೋಧ ಮಾಡುವುದು ಯಾಕೆ. ಜಾತಿ ಗಣತಿಯ ವರದಿ ಇನ್ನೂ ಸ್ವೀಕಾರ ಆಗಿಲ್ಲ ಎಂದಿದ್ದಾರೆ.
ಇನ್ನು ಇದೇ ವಿಚಾರಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿದ್ದು, ವರದಿ ಮೂಲ ಪ್ರತಿ ಮಿಸ್ಸಿಂಗ್ ಆಗಲು ಸರ್ಕಾರವೇ ಕಾರಣ. ಕಾಂತರಾಜು ವರದಿ ಸಿದ್ದರಾಮಯ್ಯ ಕಾಲದಲ್ಲಿ ನೇಮಕವಾಗಿತ್ತು. ಅವರ ಸರ್ಕಾರವೇ ಇತ್ತು ಆದರೂ ಬಿಡುಗಡೆ ಮಾಡಲಿಲ್ಲ. ಐದು ವರ್ಷ ಇದ್ದರು ಬಿಡುಗಡೆ ಮಾಡಲಿಲ್ಲ. ಆಮೇಲೆ ನಮ್ಮ ಸರ್ಕಾರ ಬಂತು. ಅವರ ಸಹಿಯೇ ಇರಲಿಲ್ಲ. ಹೀಗಿದ್ದಾಗ ಅವರ ವರದಿಯೇ ಸುಳ್ಳು.
ಒಕ್ಕಲಿಗರ, ವೀರಶೈವ ಇತರ ಸಮುದಾಯ ಅದರ ವಿರುದ್ಧ ಧ್ವನಿ ಎತ್ತಿದ್ದಾರೆ. ಅವರಿಗೆ ಯಾವ್ಯಾವ ಜಾತಿ ಬೇಕೋ, ಅದಕ್ಕೆ ಏನೇನು ಬೇಕೋ ಅದನ್ನು ಸೇರಿಸಿಕೊಳ್ಳುತ್ತಾರೆ. ನಾನೇ ನೋಡಿದ್ದೀನಿ ಆ ವರದಿಯಲ್ಲಿ ಸಹಿಯೇ ಇಲ್ಲ. ಬೋಗಸ್ ವರದಿ ಇಟ್ಟುಕೊಂಡು ಜಯಪ್ರಕಾಶ್ ಅವರ ಸಹಿ ಮಾಡಿ ಕೊಡುವ ಪ್ರಯತ್ನ ಮಾಡುತ್ತಾ ಇದ್ದಾರೆ. ಅದು ಆಗಬಾರದು ಎಂದಿದ್ದಾರೆ.