ಬೆಂಗಳೂರು; ಇಂದು ಬೆಳಗ್ಗೆಯಿಂದಾನೇ ಎಲ್ಲರ ಚಿತ್ತ ಸಚಿವ ಸಂಪುಟದತ್ತ ನೆಟ್ಟಿತ್ತು. ಯಾಕಂದ್ರೆ ಜಾತಿ ಗಣತಿ ವರದಿ ಜಾರಿಯಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಇಂದು ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಆದರೆ ವರದಿ ಜಾರಿಯಾಗಿದೆ. ಹೆಚ್.ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ 2015ರ ಏಪ್ರಿಲ್ 11 ರಿಂದ ಮೇ 30ರವರೆಗೂ ಸಮೀಕ್ಷೆ ನಡೆದಿತ್ತು.

ಈ ಬಗ್ಗೆ ಮಾತನಾಡಿರುವ ಕಾಂತರಾಜ, ಜಾತಿ ಗಣತಿ ವರದಿಯೇ ಲೇಟಾಗಿದೆ ಅನ್ನುವುದು ಅಪ್ರಸ್ತುತ. ಜಾತಿ ಗಣತಿಯನ್ನು ಪದೇ ಪದೇ ಮಾಡುವುದಕ್ಕೆ ಆಗಲ್ಲ. ಜಾತಿಗಣತಿ ಕಾರ್ಯಗಳೆಲ್ಲಾ ದೊಡ್ಡ ಕೆಲಸವಾಗಿದೆ. 54 ಅಂಶಗಳ ಮೇಲೆ ಮಾಹಿತಿ ಪಡೆದು ವರದಿ ನೀಡಲಾಗಿದೆ. ಜಾತಿಯನ್ನು ಒಂದು ಅಂಶವಾಗಿ ಇಟ್ಟುಕೊಂಡು ಹಾಗೂ ವೈಜ್ಞಾನಿಕವಾಗಿ ಜಾತಿಗಣತಿ ವರದಿಯನ್ನು ಸಿದ್ಧ ಮಾಡಲಾಗಿದೆ. ವೆದಿಯಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ.

ದತ್ತಾಂಶ ಅಂಕಿ ಅಂಶಗಳಿಗೆ ಹೋಲಿಕೆಯಾಗಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇದೆ ವೇಳೆ ಜಾತಿಗಣತಿ ಜಾರಿಗೆ ಕಾಂಗ್ರೆಸ್ ನಾಯಕರ ಒಪ್ಪಿಗೆ ಇದ್ಯಾ ಎಂಬ ಪ್ತಹ್ಲಾದ್ ಜೋಶಿ ಪ್ರಶ್ನೆಗೆ ಉತ್ತರಿಸಿ, ಪ್ರಹ್ಲಾದ್ ಜೋಶಿ, ಪ್ರಧಾನಿ ಮೋದಿ ಅವರ ಜೊತೆಗೆ ಇರುತ್ತಾರಲ್ವಾ. ಮೊದಲು ಮೋದಿ ಬಿಜೆಪಿ ನಿಲುವನ್ನು ಸ್ಪಷ್ಟಪಡಿಸಲಿ. ಜಾತಿಗಣತಿ ವರದಿಗೂ ಕಾಂಗ್ರೆಸ್ ಹೈಕಮಾಂಡ್ ಗೂ ಸಂಬಂಧವಿಲ್ಲ. ಇದು ರಾಜ್ಯ ಸರ್ಕಾರದ ತೀರ್ಮಾನವಾಗಿದೆ. ವರದಿಯನ್ನು ರಾಜ್ಯ ಸರ್ಕಾರಕ್ಕೆ ಕೊಟ್ಟ ಬಳಿಕ ತ್ರಿಜೋರಿಯಲ್ಲಿ ಇಟ್ಟಿದ್ದೆವು. ವರದಿ ಬಗ್ಗೆ ಪರ, ವಿರೋಧ ಚರ್ಚೆಯಾಗ್ತಾ ಇದೆ. ವರದಿಯೂ ಎಲ್ಲಿಯೂ ಬಹಿರಂಗ ಆಗಿಲ್ಲ. ಈಗ ಬರುತ್ತಿರುವ ಅಂಕಿ, ಸಂಖ್ಯೆ ಎಲ್ಲವೂ ಊಹಾಪೋಹ ಎಂದಿದ್ದಾರೆ.


