ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಕೆ ಕೇಸ್ : ಸಿಐಡಿ ತನಿಖೆಯಲ್ಲಿ ಹೊರ ಬಿತ್ತು ಶಾಕಿಂಗ್ ನ್ಯೂಸ್..!

suddionenews
1 Min Read

ಬೆಂಗಳೂರು: ಸದನದ ವೇಳೆ ಸಿಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಆ ಮಾತಿನ ಚಕಮಕಿಯಲ್ಲಿ ಸಿಟಿ ರವಿ ವೇಶ್ಯೆ ಎಂಬ ಪದ ಬಳಕೆ ಮಾಡಿದ್ದರು. ಈ ಪದ ಬಳಕೆ ದೊಡ್ಡ ಮಟ್ಟಕ್ಕೆ ಪರಿಣಾಮ ಉಂಟು ಮಾಡಿತ್ತು. ಸಿಟಿ ರವಿ ಅವರನ್ನ ಪೊಲೀಸರು ಅರೆಸ್ಟ್ ಕೂಡ ಮಾಡಿದ್ದರು. ಪರ ವಿರೋಧಗಳು ಕೇಳಿ ಬಂತು. ಬಳಿಕ ಸಿಟಿ ರವಿ ಅವರು ನಾನು ಆ ಪದ ಬಳಕೆ ಮಾಡಿಲ್ಲ ಪ್ರಸ್ಟ್ರೇಟ್ ಅಂತ ಬಳಸಿದ್ದೀನಿ ಅಂದ್ರು. ಇದೀಗ ಅದರ ವರದಿ ಬಂದಿದ್ದು ಸಿಟಿ ರವಿ ಅವರು ಆ ಪದ ಬಳಕೆ ಮಾಡಿರುವುದು ಸತ್ಯ ಎನ್ನಲಾಗಿದೆ.

ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಸದನದ ವಿಡಿಯೋವನ್ನು ಸಿಐಡಿ ಪೊಲೀಸರು ಫೋರಿನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ಸಂಬಂಧ ವರದಿ ಬಂದಿದ್ದು, ಸಿಟಿ ರವಿ ಅವಾಚ್ಯ ಶಬ್ದ ಬಳಕೆ ಮಾಡಿರುವುದು ಅದರಲ್ಲಿ ದೃಢವಾಗಿದೆ. ಅದರಲ್ಲೂ ನಾಲ್ಕು ಗಂಟೆಯ ವಿಡಿಯೋ ರೆಕಾರ್ಡ್ ನಲ್ಲಿ ಒಟ್ಟು ಏಳು ಬಾರಿ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ.

ಆದರೆ ರವಿ ಅವರು ನಾನು ಆ ಪದ ಬಳಕೆ ಮಾಡಿಲ್ಲ ಎಂದೇ ವಾದ ಮಾಡಿದ್ದಾರೆ. ಹೀಗಾಗಿ ಪೊಲೀಸರು ಸಿಟಿ ರವಿ ಅವರ ವಾಯ್ಸ್ ಸ್ಯಾಂಪಲ್ ಪಡೆಯಲು ಮುಂದಾಗಿದ್ದಾರೆ. ಆದರೆ ಅವರು ನೀಡಿಲ್ಲ. ಈ ಸಂಬಂಧ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದ್ದು, ಅಲ್ಲಿಂದಾನೇ ವಿಚಾರಣೆಗೆ ಹಾಗೂ ವಾಯ್ಸ್ ಸ್ಯಾಂಪಲ್ ಗೆ ಪೊಲೀಸರು ಅನುಮತಿ ಪಡೆಯಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *