ಆತ್ಮಹತ್ಯೆ ಮಾಡಿಕೊಂಡ KAS ಆಫೀಸರ್ ಪ್ರಕರಣ : ಪೊಲೀಸರಿಗೆ ತಲೆನೋವಾದ ಕೇಸ್..!

 

ಬೆಂಗಳೂರು: ನಿನ್ನೆ ಹೈಕೋರ್ಟ್ ವಕೀಲೆ ಚೈತ್ರಾ.ಬಿ. ಗೌಡ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ವಕೀಲೆಯಾಗಿ, ಮಾಡೆಲ್ ಆಗಿ ಚೆನ್ನಾಗಿದ್ದ ವಕೀಲೆ ಇದ್ದಕ್ಕಿದ್ದ ಹಾಗೇ ಹೀಗೆ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಸಂಜಯನಗರ ಪೊಲೀಸರು ಈ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದು, ಡೆತ್ ನೋಟ್ ಸಿಕ್ಕಿದೆ. ಆದರೆ ಈ ಡೆತ್ ನೋಟ್ ನಲ್ಲಿ ಬರೆದ ವಿಚಾರ ಪೊಲೀಸರ ತಲೆ ಕೆಡಿಸಿದೆ.

ಮೂರು ತಿಂಗಳ ಹಿಂದೆಯೇ ಚೈತ್ರಾ ಈ ಡೆತ್ ನೋಟ್ ಬರೆದಿಟ್ಟಿದ್ದಾರೆ. ‘ನಾನು ಕಳೆದ ಕೆಲವು ತಿಂಗಳಿನಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೇನೆ. ಆದರೆ ಅದರಿಂದ ಹಿರಗೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಮಗಳನ್ನು ಚೆನ್ನಾಗಿ ನೊಡಿಕೊಳ್ಳಿ. ಲೈಫ್ ಎಂಜಾಯ್ ಮಾಡಿ. ನನ್ನ ಗಂಡ ತುಂಬಾ ಒಳ್ಳೆಯವರು’ ಎಂದು ಬರೆದಿದ್ದಾರೆ. ಈ ಡೆತ್ ನೋಟ್ ಸಿಕ್ಕ ಮೇಲೆ ಹಲವು ಅನುಮಾನಗಳು ಮೂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಚೈತ್ರಾ ಹೈಕೋರ್ಟ್ ನಲ್ಲಿ ವಕೀಲೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. 2016ರಲ್ಲಿ ಕೆಐಡಿಬಿಯಲ್ಲಿ ಉಪವಿಭಾಗಾಧಿಕಾರಿಯಾಗಿರುವ ಶಿವಕುಮಾರ್ ಅವರನ್ನು ಮದುವೆಯಾಗಿದ್ದರು. ಇಬ್ಬರಿಗೂ ಒಂದು ಮಗು ಕೂಡ ಇದೆ. ಸದ್ಯ ಪೊಲೀಸರು ಎಲ್ಲಾ ಆಯಾಮದಿಂದಾನು ತನಿಖೆ ನಡೆಸುತ್ತಿದ್ದಾರೆ. ಚೈತ್ರಾ ಸಾವಿಗೂ ಮುನ್ನ ಯಾರಿಗೆಲ್ಲಾ ಕರೆ ಮಾಡಿದ್ದರು, ವಾಟ್ಸಾಪ್ ಚಾಟ್ ಹೀಗೆ ಎಲ್ಲಾ ವಿಚಾರವನ್ನು ತನಿಖೆ ನಡೆಸುತ್ತಿದ್ದು, ಚೈತ್ರಾ ಸಾವಿಗೆ ಕಾರಣವೇನು ಎಂಬುದನ್ನು ಪತ್ತೆ ಮಾಡಲು ಪ್ರಯತ್ನ ಪಡುತ್ತಿದ್ದಾರೆ. ಚೈತ್ರಾ, ವಕೀಲೆಯಾಗಿ, ಮಾಡೆಲ್ ಆಗಿ, ಬ್ಯಾಡ್ಮಿಂಟನ್ ನಲ್ಲೂ ಗುರುತಿಸಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *