ನಾಳೆ ಭಾರತ್ ಬಂದ್ ಗೆ ಕರೆ : ಏನಿರುತ್ತೆ..? ಏನಿರಲ್ಲ ಎಂಬುದೇ ಸ್ಪಷ್ಟವಾಗಿಲ್ಲ..!

ನವದೆಹಲಿ: ಎಸ್ಸಿ/ಎಸ್ಟಿ ಒಳಪಂಗಡಗಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ರಿಸರ್ವೇಷನ್ ಬಚಾವೋ ಸಂಘರ್ಷ ಸಮಿತಿಯು ನಾಳೆ ಭಾರತ್ ಬಂದ್ ಗೆ ಕರೆ ನೀಡಿದೆ. ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಂದ್ ಗೆ ವ್ಯಾಪಕ ಬೆಂಬಲ ಸಿಕ್ಕಿದೆ. ಹೀಗಾಗಿ ಆ ಪ್ರದೇಶದಲ್ಲಿ ಬಂದ್ ನ ತೀವ್ರತೆ ಹೆಚ್ಚಾಗಿಲಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಹೆಚ್ಚಿನ ಬಿಗಿಭದ್ರತೆ ಒದಗಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲು ಎಸ್ಪಿಗಳಿಗೆ ಡಿಜಿಪಿ ಯುಆರ್ ಸಾಹು ಸಲಹೆಗಳನ್ನು ನೀಡಿದ್ದಾರೆ.

ವರದಿಗಳ ಪ್ರಕಾರ, ಎಸ್ಸಿ/ಎಸ್ಟಿ ಸಮುದಾಯಗಳಲ್ಲೂ ಒಳಪಂಗಡಗಳನ್ನು ಗುರುತಿಸುವಂತೆ ಎಲ್ಲಾ ರಾಜ್ಯಗಳಿಗೂ ಸೂಚನೆ ನೀಡಿತ್ತು. ಇದನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆ ನಡೆಸಲು ರಿಸರ್ವೇಷನ್ ಬಚಾವೋ ಸಂಘರ್ಷ ಸಮಿತಿ ಕರೆ ನೀಡಿದೆ‌. ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂ್ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ನೀಡಲಾಗುತ್ತಿದೆ. ಎಸ್ಸಿ/ಎಸ್ಟಿಯಲ್ಲಿರೋ ಪ್ರಬಲ ಜಾತಿಗಳೇ ಹೆಚ್ಚಿನ ಪ್ರಮಾಣದ ಮೀಸಲಾತಿ ಪಡೆಯುತ್ತಿವೆ. ಹಾಗಾಗಿ ಎಲ್ಲರಿಗೂ ಸಮಾನವಾಗಿ ಒಳನೀಸಲಾತಿ ನೀಡಲು ಅವಕಾಶ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಪರಿಶಿಷ್ಟ ಜಾತಿ ಹಾಗೂ ಪಂಗಡದಲ್ಲೂ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾ ನೀಡಲು ಅನುಮತಿ ಇದೆ ಎಂದು ಹೇಳಿತ್ತು. ಸುಪ್ರೀಂ ಕೋರ್ಟ್ ತೀರ್ಪಿಗೆ ಈಗ ಅವಶ್ಯಕತೆ ಇದ್ದವರಿಗೆ ಪ್ರಮುಖ್ಯತೆ ನೀಡಿ ಮೀಸಲಾತಿ ನೀಡಬೇಕೆಂದು ರಿಸರ್ವೇಷನ್ ಬಚಾವೋ ಸಂಘರ್ಷ ಸಮಿತಿ ಒತ್ತಾಯಿಸಿದೆ.

ಆದರೆ ಕರ್ನಾಟಕದಲ್ಲಿ ಈ ಬಂದ್ ಪರಿಣಾಮ ಬೀರುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಏನಿರುತ್ತೆ..? ಏನಿರಲ್ಲ ಎಂಬುದರ ಬಗ್ಗೆಯೂ ಯಾವುದೇ ಮಾಹಿತಿ ಸ್ಪಷ್ಟವಾಗಿಲ್ಲ. ಎಲ್ಲವೂ ಸಹಜ ಸ್ಥಿತಿಯಲ್ಲಿಯೇ ಇರಲಿದೆ ಎನ್ನಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *