ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ಐದು ಯೋಜನೆಗಳೇ ಸವಾಲಾಗಿದೆ. ಈಗ ಜಾರಿಯಾಗಲೇಬೇಕಾಗಿದೆ. ಜನರ ನಂಬಿಕೆಯನ್ನು ಉಳಿಸಿಕೊಳ್ಳಲೇಬೇಕಾಗಿದೆ. ಹೀಗಾಗಿ ಸಚಿವ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ಮಾಡಲು, ನಾಳೆ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲು ಸಭೆ ಕರೆಯಲಾಗಿತ್ತು. ಆದರೆ ಈ ಸಭೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.
ಕಾಂಗ್ರೆಸ್ ಸರ್ಕಾರದ ಐದು ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಸುಮಾರು 56 ಸಾವಿರ ಕೋಟಿಯಷ್ಟು ಬೃಹತ್ ಮೊತ್ತ ಬೇಕಾಗಿದೆ. ಹೀಗಾಗಿ ಕಂದಾಯ ಇಲಾಖೆ, ಅಬಕಾರಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಂದ ಬೆಂಬಲ ಸಿಗಬೇಕಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಸಿಎಂ ಈ ಎಲ್ಲಾ ಯೋಜನೆಗೂ ಸೂಚನೆ ನೀಡಬಹುದು.
ಈಗಾಗಲೇ ಕಾಂಗ್ರೆಸ್ ಸರ್ಕಾರದಲ್ಲೂ ಯೋಜನೆಗಳ ಬಗ್ಗೆ ಚರ್ಚೆ ನಡೆದಿದೆ. ಎಷ್ಟು ಹಣ ಬೇಕಾಗಬಹುದು ಎಂಬುದೆಲ್ಲವನ್ನು ಚರ್ಚೆ ನಡೆಸಿದ್ದಾರೆ. ಇನ್ನು ಯೋಜನೆಗಳನ್ನು ಜಾರಿಗೆ ತಂದೇ ತರುತ್ತೀವಿ ಎಂಬ ಮಾತನ್ನು ಎಲ್ಲಾ ಸಚಿವರು ತಿಳಿಸಿದ್ದಾರೆ.