ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಭಾರತೀಯ ಕಿಸಾನ್ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

1 Min Read

ಚಿತ್ರದುರ್ಗ. (ಫೆ.18) : ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

1.ಕಡ್ಲೆ ಖರೀದಿ ಕೇಂದ್ರ ಶೀಘ್ರವಾಗಿ ತೆರೆಯಬೇಕು.
2.ಅತಿವೃಷ್ಟಿ ಮತ್ತು ಅನಾವೃಷ್ಟಿ ಪರಿಹಾರದ ಹಣ ತಾರತಮ್ಮ ಹಾಗು ಕೆಲವು ರೈತರ ದಾಖಲೆಗಳನ್ನು ಗಣಕೀರಣ ಮಾಡದೇ ರೈತರಿಗೆ ಅನ್ಯಾಯವಾಗಿದೆ. ಆದುದರಿಂದ ಮತ್ತೆ ಗಣಕೀರಣಕ್ಕೆ ಅನುಮತಿ ನೀಡಿ ಪರಿಹಾರ ದೊರಕುವಂತೆ ಮಾಡಬೇಕು.

3.ಗ್ರಾಮ ಲೆಕ್ಕಿಗರು ರೈತರ ದಾಖಲೆಗಳನ್ನು ಗಣಕೀಕೃತ ಮಾಡದೆ ಸುಖ ಸುಮ್ಮನೆ ರೈತರನ್ನು ಕೃಷಿ ಇಲಾಖೆಯ ಒಳಗೆ ಅಲೆದಾಡುವಂತೆ ಮಾಡಿದ್ದಾರೆ. ಆದುದರಿಂದ ಗ್ರಾಮ ಲೆಕ್ಕಿಗರ ಮೇಲೆ ಕ್ರಮ ತೆಗೆದುಕೊಳ್ಳಬೇಕು.

4.ತುಂತುರು ನೀರಾವರಿ ಯೋಜನೆಯ ಅಡಿಯಲ್ಲಿ ರೈತರು ಅರ್ಜಿ ಸಲ್ಲಿಸಿದಲ್ಲಿ ಒಂದು ತಿಂಗಳ ಹಿಂದೆ ಆರ್.ಟಿ.ಜಿ.ಎಸ್ ಮಾಡಿ ರೈತರ ಖಾತೆಯಿಂದ ಹಣ ತುಂಬಿದ ನಂತರ ಈಗ ಕಂಪನಿಯವರು ವಿಳಂಬ ಮಾಡುತ್ತಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸುತ್ತಿದ್ದಾರೆ ಮತ್ತು ಹಣವನ್ನು ಹಿಂತಿರುಗಿಸಿ ಕೊಡುತ್ತೇವೆ. ನೀವು ಬೇರೊಂದು ಕಂಪನಿಗೆ ಮತ್ತೆ ಆರ್.ಟಿ.ಜಿ.ಎಸ್ ಮಾಡಿ ಎಂದು ಹೇಳುತ್ತಾರೆ. ಇಲಾಖೆಯವರು ಕಂಪನಿಯವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ರೈತರ ಹಣ ಮತ್ತು ಸಮಯಕ್ಕೆ ಬೆಲೆ ಇಲ್ಲವೆ. ಆದುದರಿಂದ ರೈತರನ್ನು ಅಲೆದಾಡಿಸುತ್ತಿರುವ ಕೃಷಿ ಇಲಾಖೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಿ ಮತ್ತು ಕಂಪನಿಗಳಿಗೆ ಅನುಮತಿ ನೀಡದೇ ಆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಮತ್ತು ಸರಿಯಾದ ಸಮಯಕ್ಕೆ ರೈತರಿಗೆ ಸವಲತ್ತುಗಳನ್ನು ನೀಡುವ ಕಂಪನಿಗಳಿಗೆ ಅನುಮತಿ ನೀಡಬೇಕು.

5.ಸಹಕಾರ ಸಂಘಗಳಲ್ಲಿ ರೈತರಿಗೆ ಸರಿಯಾದ ಸಮಯಕ್ಕೆ ಸಾಲ ಸೌಲಭ್ಯಗಳು ದೊರೆಯುತ್ತಿಲ್ಲ. ಮತ್ತು ನವೀಕರಣ ಮಾಡಿದ ರೈತರಿಗೆ ತಿಂಗಳುಗಳು ಕಳೆದರು ಸಹ ಸಾಲ ದೊರೆಯುವುದಿಲ್ಲ. ಸಹಕಾರ ಸಂಘಗಳಲ್ಲಿ ಸರಿಯಾದ ನಿಯಮ ಪಾಲನೆ ಮಾಡುವಂತೆ ಆದೇಶಿಸಬೇಕು.

6.ರಾಗಿ ಖರೀದಿ ಕೇಂದ್ರದಲ್ಲಿ ಸಣ್ಣ ರೈತರಿಗೆ ಮಾತ್ರ ಅವಕಾಶವಿದ್ದು, ಅದನ್ನು ದೊಡ್ಡ ರೈತರಿಗೂ ಅವಕಾಶಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಜಿಲ್ಲಾದ್ಯಕ್ಷ ಜ್ಞಾನೇಶ್ವರ ,ವಿದ್ಯುತ್ ಪ್ರಮುಖ್ ಏಕಾಂತಪ್ಪ, ಉಪಾಧ್ಯಕ್ಷ ಸುದೇಶ್,  ಸಹ ಕಾರ್ಯದರ್ಶಿ ಚಂದ್ರುಶೇಖರ ರೆಡ್ಡಿ , ಖಜಾಂಚಿ ತಾಯಣ್ಣ ಸೇರಿದಂತೆ ಇತರೆ ಪದಾಧಿಕಾರಿಗಳು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *