ಶಿವಮೊಗ್ಗ: ಯಾವುದೋ ವಿಚಾರಕ್ಕೆ ಜಗಳ ಆಡಿದ ವಿದ್ಯಾರ್ಥಿಗಳು, ಪಾಪದ ಹುಡುಗ ಸಂಕೇತ್ ನನ್ನು ಕೊಂದೇ ಬಿಟ್ಟರು. ಒಬ್ಬಳೇ ಮಗಳು, ಒಬ್ಬನೇ ಮಗ, ಸಾವಿರಾರು ಕನಸುಗಳನ್ನ ಕಂಡು ಮಕ್ಕಳನ್ನ ಓದಿಸ್ತಾ ಇದ್ರು. ಅಕ್ಕನಿಗೂ ತಮ್ಮನೆಂದರೆ ಪ್ರಾಣ. ಆ ತಾಯಿಗೆ ಮಗನ ಭವಿಷ್ಯದ ಬಗ್ಗೆ ಅಗಾಧವಾದ ಕನಸು. ಆದರೆ ಅದೆಲ್ಲವೂ ನಿನ್ನೆಗೆ ಮಣ್ಣು ಪಾಲು. ಹುಡುಗರು ಎದೆಗೆ ಹೊಡೆದ ಹೊಡೆತಕ್ಕೆ ಪ್ರಾಣ ಬಿಟ್ಟ ಸಂಕೇತ್ ಮನೆಗೆ ಸಂಸದ ಬಿವೈ ರಾಘವೇಂದ್ರ ಇಂದು ಭೇಟಿ ನೀಡಿ, ಸಾಂತ್ವಾನ ಹೇಳಿದ್ದಾರೆ.
ಪೋಷಕರ ಆಕ್ರಂದನ ಕಂಡು ರಾಘವೇಂದ್ರ ಅವರೇ ಮೌನವಾಗಿ ಕುಳಿತು ಬಿಟ್ಟರು. ಬೇರೆಯವರನ್ನು ಕಾಪಾಡಲು ಹೋದ ಹುಡುಗನಿಗೆ ಹಿಂಗಾಗಬಾರದಿತ್ತು. ಮಗಳಲ್ಲೇ ಮಗನನ್ನ ಕಾಣಿ ಎಂದು ಸಾಧ್ಯವಾದಷ್ಟು ಸಮಾಧಾನ ಮಾಡಿದರು. ಮಗಳನ್ನ ಚೆನ್ನಾಗಿ ಓದಿಸಪ್ಪ ಎಂದು ಧೈರ್ಯ ತುಂಬಿದರು. ಆ ಕ್ಷಣದಲ್ಲಿ ಒಂದಷ್ಟು ಹಣವನ್ನ ರಾಘವೇಂದ್ರ ಅವರು ಪರಿಹಾರವಾಗಿ ನೀಡಿದರು. ಆದರೆ ಮೃತ ಸಂಕೇತ್ ಅವರ ಅಕ್ಕ ಈ ಹಣ ಬೇಡ ಸರ್ ನಮ್ಗೆ ತಮ್ಮ ಬೇಕು ಅಂತಾನೇ ಕಣ್ಣೀರು ಹಾಕಿದರು.
ಮನೆ ಮಂದಿಗೆ ಸಾಂತ್ವಾನ ಹೇಳಿ ಬಿವೈ ರಾಘವೇಂದ್ರ ಅವರು ಹೊರಟರು. ಈ ವೇಳೆ ನಮಗೆ ಆದ ಅನ್ಯಾಯ ಇನ್ಯಾರಿಗೂ ಆಗಬಾರದು. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು ಅಂತಾನೇ ಕುಟುಂಬಸ್ಥರು ಮತ್ತೊಮ್ಮೆ ಮನವಿ ಮಾಡಿದರು. ಈ ಕೊಲೆ ಕೇಸ್ ಸಂಬಂಧ ಈಗಾಗಲೇ ಪೊಲೀಸರು ಅಪ್ತಾಪ್ತ ಬಾಲಕರನ್ನ ಅರೆಸ್ಟ್ ಮಾಡಿದ್ದಾರೆ. ವಿಚಾರಣೆಯೂ ನಡೆಯುತ್ತಿದೆ.



