ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್ 07 : ಅಂತರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ ಇವರ ವತಿಯಿಂದ ನಗರದ ಶ್ರೀಮತಿ ಕಾಟಮ್ಮ ಪಟೇಲ್ ವೀರನಾಗಪ್ಪ ಸಮುದಾಯ ಭವನದಲ್ಲಿ (ಉಮಾಪತಿ ಕಲ್ಯಾಣ ಮಂಟಪ)
2 ದಿನಗಳ ಕಾಲ ಶ್ರೀಕೃಷ್ಣ ಜನ್ಮಾಷ್ಮಮಿ ಸಂಭ್ರಮ ನಡೆಯಲಿದೆ.
ಸೆಪ್ಟೆಂಬರ್ 7 ರ ಕಾರ್ಯಕ್ರಮಗಳು:
ಚಿತ್ರದುರ್ಗದ ಶಾಸಕರಾದ ಕೆ.ಸಿ ವೀರೇಂದ್ರ ಪಪ್ಪಿಯವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಜಿಲ್ಲಾಧಿಕಾರಿ ಶ್ರೀಮತಿ ದಿವ್ಯ ಪ್ರಭು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರ ಸ್ವಾಮಿ, ಮುಖ್ಯ ಪೋಷಕ ಅತಿಥಿಗಳಾಗಿ ಎ.ವಿ.ಉಮಾಪತಿ ಮತ್ತು ಶ್ರೀಮತಿ ಆರ್. ಯಶೋಧಾದೇವಿ ಉಮಾಪತಿಯವರು ಭಾಗವಹಿಸುವರು.
ನಂತರ ಶ್ರೀ ಕೃಷ್ಣ ವೇಷಭೂಷಣ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಾಭಿಷೇಕ, ಮಹಾಮಂಗಳಾರತಿ, ಕಾರ್ಯಕ್ರಮಗಳು ನೆರವೇರಲಿವೆ.
ಅಭಿಷೇಕ ಸೇವೆ, ರಾಜಭೋಗ ಸೇವೆ,
ಪುಷ್ಪಾಲಂಕಾರ ಸೇವೆ, ಜನ್ಮಾಷ್ಟಮಿ ಸೇವೆ,
ತೊಟ್ಟಿಲು ಸೇವಾ, ತುಳಸಿ, ಆರ್ಚನ ಹಾಗೂ ಇತರ ಸೇವೆಗಳು ಸಂಜೆ 5.00 ರಿಂದ ರಾತ್ರಿ 12:00ರವರೆಗೆ ನಡೆಯುತ್ತವೆ. ಧಾನ್ಯ, ಹಾಲು, ತುಪ್ಪ, ಹಣ್ಣು, ಹೂವು ಇತ್ಯಾದಿಗಳ ರೂಪದಲ್ಲಿಯೂ ಸಹ ಭಕ್ತಾದಿಗಳು ಸೇವೆ ಸಲ್ಲಿಸಬಹುದು.
ಸೆಪ್ಟೆಂಬರ್ 8 ರ ಕಾರ್ಯಕ್ರಮಗಳು:
ನಂದೋತ್ಸವ ಮತ್ತು ಶೀಲ ಪ್ರಭುಪಾದರ ಅವಿರ್ಭಾವ ಮಹೋತ್ಸವ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೂ ನಡೆಯಲಿದೆ.
ಇಂದು ಮತ್ತು ನಾಳೆ ವಿವಿಧ ಪೂಜೆಗಳು ನಡೆಯಲಿದ್ದು ವಿಶೇಷ ಅಹಂಕಾರದಿಂದ ಕಂಗೊಳಿಸುವ ಶ್ರೀ ಕೃಷ್ಣನನ್ನು ಕಣ್ತುಂಬಿಕೊಳ್ಳಬಹುದು. ನೀವು ಮತ್ತು ನಿಮ್ಮ ಕುಟುಂಬದವರು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ಭಾಗವಹಿಸಿ. ಶ್ರೀಕೃಷ್ಣನ ಆಶೀರ್ವಾದ ಪಡೆಯಿರಿ ಎಂದು ಚಿತ್ರದುರ್ಗದ ಇಸ್ಕಾನ್ ಸಮಿತಿ ಯವರು ಆಹ್ವಾನಿಸಿದ್ದಾರೆ.