ನವದೆಹಲಿ : ನವೆಂಬರ್ 3 ಗುರುವಾರದಂದು ಆರು ರಾಜ್ಯಗಳಲ್ಲಿ ವಿಧಾನಸಭಾ ಉಪಚುನಾವಣೆ ಪ್ರಾರಂಭವಾಗಿದೆ.

ಇಂದು ಉಪಚುನಾವಣೆ ನಡೆಯುತ್ತಿರುವ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜನರು ಸಾಲುಗಟ್ಟಿ ನಿಂತಿದ್ದಾರೆ.

ಆರು ಉಪಚುನಾವಣೆ ಕ್ಷೇತ್ರಗಳಲ್ಲಿ ಕ್ರಮವಾಗಿ ಗೋಪಾಲ್‌ಗಂಜ್ ಮತ್ತು ಮೊಕೊಮಾ (ಬಿಹಾರ),
ಆದಂಪುರ (ಹರಿಯಾಣ),
ಅಂಧೇರಿ ಪೂರ್ವ (ಮಹಾರಾಷ್ಟ್ರ), ಧಮ್‌ನಗರ (ಒಡಿಶಾ),
ಮುನುಗೋಡ್ (ತೆಲಂಗಾಣ), ಮತ್ತು ಗೋಲಾ ಗೋರಕನಾಥ್ (ಉತ್ತರ ಪ್ರದೇಶ) ಸೇರಿವೆ.
ಉಪಚುನಾವಣೆ ನಡೆಯುತ್ತಿರುವ ಏಳು ಸ್ಥಾನಗಳ ಪೈಕಿ, ಭಾರತೀಯ ಜನತಾ ಪಕ್ಷ (ಬಿಜೆಪಿ) ಮೂರು, ಕಾಂಗ್ರೆಸ್ ಎರಡು ಸ್ಥಾನಗಳನ್ನು ಹೊಂದಿದ್ದರೆ, ಶಿವಸೇನೆ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ತಲಾ ಒಂದನ್ನು ಹೊಂದಿದ್ದವು.
ಉಪಚುನಾವಣೆಯಲ್ಲಿ ಪಕ್ಷಗಳು ಸ್ಪರ್ಧೆಯನ್ನು ಲಘುವಾಗಿ ಪರಿಗಣಿಸದೆ ಅಬ್ಬರದ ಪ್ರಚಾರವನ್ನು ನಡೆಸಿವೆ.
ನವೆಂಬರ್ 6 ರಂದು ಮತ ಎಣಿಕೆ ನಡೆಯಲಿದೆ.

