ಉಪಚುನಾವಣೆಗಳು ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಆಗುವುದಿಲ್ಲ: ಡಿ ಕೆ ಶಿವಕುಮಾರ್

suddionenews
1 Min Read

ಹುಬ್ಬಳ್ಳಿ: ಉಪಚುನಾವಣೆಗಳು ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಆಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ರಾಜ್ಯದ ಜನತೆಗೆ ಆಗಿರುವ ನೋವು ಹೇಳಿಕೊಳ್ಳಲು ಇದು ಒಂದು ಅವಕಾಶ ಎಂದರು.

ಉಪಚುನಾವಣೆಯಲ್ಲಿ ಆಡಳಿತ ಯಂತ್ರ ಬಳಸಿಕೊಳ್ಳುವ ಅವಕಾಶ ಇರುತ್ತದೆ. ಅದು ಬಿಜೆಪಿಯವರಿಗೆ ಚೆನ್ನಾಗಿ ಗೊತ್ತಿದೆ. ಅವರು ಏನೇ ಮಾಡಿದರೂ ಮತದಾರರ ತೀರ್ಪು ಮುಖ್ಯ. ಜನ ತಮ್ಮ ಮತವನ್ನು ಒತ್ತಡ ಮತ್ತಿತರ ವಿಚಾರಕ್ಕೆ ಮಾರಿಕೊಳ್ಳಬಾರದು. ಅರುಣ್ ಸಿಂಗ್ ಅವರು ಯಡಿಯೂರಪ್ಪ ಅವರು ಪ್ರಾಮಾಣಿಕರು, ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಮಾಡುವುದಿಲ್ಲ ಎಂದಿದ್ದರು. ಆದರೆ ಏನಾಯ್ತು? ಯತ್ನಾಳ್ ಹಾಗೂ ಬೆಲ್ಲದ್ ಅವರು ಏನು ಹೇಳಿದ್ದರು? ಮತ್ತೆ ಕೆಲವರು ಪರೀಕ್ಷೆ ಪಾಸ್ ಮಾಡುವುದಾಗಿ ತಿಳಿಸಿದ್ದರು. ಹೀಗಾಗಿ ಬಿಜೆಪಿ ಅವರ ಮಾತು ನಂಬಲು ಸಾಧ್ಯವಿಲ್ಲ.
ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು.

ಉಪಚುನಾವಣೆಯಲ್ಲಿ ಜೆಡಿಎಸ್ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಿರುವುದು, ಅವರ ರಾಜಕೀಯ ತಂತ್ರಗಾರಿಕೆ. ಅನುಭವಕ್ಕೆ ತಕ್ಕಂತೆ ಅವರು ತಂತ್ರಗಾರಿಕೆ ಮಾಡುತ್ತಾರೆ. ನಮ್ಮ ಪಕ್ಷದ ಸೂಚನೆ ಮೇರೆಗೆ ಸಮ್ಮಿಶ್ರ ಸರ್ಕಾರದಲ್ಲಿ ನಾನು ನನ್ನ ಕರ್ತವ್ಯ ಮಾಡಿದ್ದೆ. ಫಲ ಆ ಭಗವಂತ ನೋಡಿಕೊಳ್ಳಲಿ. ನಾವೇ ಅವರನ್ನು ಸಿಎಂ ಮಾಡಬೇಕು ಅಂತಾ ಹೋಗಿದ್ದು ನಿಜ. ಕೊನೆ ಘಳಿಗೆವರೆಗೂ ಬೆಂಬಲವಾಗಿ ನಿಂತಿದ್ದೆವು. ಮುಂದೆ ರಾಜ್ಯ ಹಾಗೂ ರಾಷ್ಟ್ರಕ್ಕೆ ಒಳ್ಳೆಯದಾಗಲು ಎಲ್ಲ ರೀತಿಯ ಕೆಲಸ ಮಾಡುತ್ತೇವೆ. ದೇಶಕ್ಕೆ ಒಳ್ಳೆಯದಾಗಬೇಕು, ಜಾತ್ಯಾತೀತ ತತ್ವ ಒಂದಾಗಬೇಕು. ಜಿಡಿಎಸ್ ನವರು ಕಾಂಗ್ರೆಸ್ ಸೋಲಿಸಲು ಅಥವಾ ಬಿಜೆಪಿ ಗೆಲ್ಲಿಸಲು ತಮ್ಮ ಅಭ್ಯರ್ಥಿ ಕಣಕ್ಕಿಳಿಸಿದ್ದಾರೋ? ಬಿಜೆಪಿ ಜತೆ ಒಳ ಒಪ್ಪಂದ ಮಾಡಿದ್ದಾರೋ, ಇಲ್ಲವೋ ಎಂಬುದು ನಿಮ್ಮ ವಿಶ್ಲೇಷಣೆಗೆ ಬಿಟ್ಟ ವಿಚಾರ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *