ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ : ಫಲಿತಾಂಶದಲ್ಲಿ ಸುಧಾರಣೆಯಾಗಿ ಶೈಕ್ಷಣಿಕವಾಗಿ ಅಭಿವೃದ್ದಿಯಾಗಬೇಕಾದರೆ ಪ್ರತಿ ವರ್ಷವೂ ಏನಾದರೂ ಒಂದು ಚಟುವಟಿಕೆ ನಡೆಯುತ್ತಿರಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ ತಿಳಿಸಿದರು.
ಸಿ.ವಿ.ರಾಮನ್ ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ಕ್ಲಬ್ ವತಿಯಿಂದ ಹತ್ತನೆ ತರಗತಿಯಲ್ಲಿ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ನೆರವಾಗಲಿ ಎನ್ನುವ ದೃಷ್ಟಿಯಿಂದ ಸಿದ್ದಪಡಿಸಲಾಗಿರುವ ಬುತ್ತಿ ಪ್ಯಾಕೆಟ್ ಪಾಸಿಂಗ್ ಪ್ಯಾಕೇಜ್ ಬಿಡುಗಡೆಗೊಳಿಸಿ ಮಾತನಾಡಿದರು.
ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಶೈಕ್ಷಣಿಕ ಹಿತ ದೃಷ್ಟಿಯಿಂದ ರಚಿಸಲಾಗಿರುವ ಬುತ್ತಿ ಪಾಸಿಂಗ್ ಪ್ಯಾಕೇಜ್ ಮಕ್ಕಳಿಗೆ ಅನುಕೂಲವಾಗಲಿದೆ. ಮಕ್ಕಳು ಎಲ್ಲಿಯೇ ಇರಲಿ ಈ ಪ್ಯಾಕೇಜನ್ನು ದಿನಕ್ಕೆ ಒಮ್ಮೆಯಾದರೂ ಕಣ್ಣಾಯಿಸಿದರೆ ಪಠ್ಯಕ್ಕೆ ಸಂಬAಧಿಸಿದ ಅನೇಕ ವಿಷಯಗಳು ಮನಸ್ಸಿಗೆ ನಾಟುತ್ತದೆ. ಇದರಲ್ಲಿ ಶಿಕ್ಷಕರುಗಳ ಪಾತ್ರ ಅಡಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ವಿಜ್ಞಾನ ಶಿಕ್ಷಕರ ಕ್ಲಬ್ ಅಧ್ಯಕ್ಷ ಬಿ.ವಿ.ನಾಥ್ ಮಾತನಾಡಿ ಮಕ್ಕಳಿಗೆ ಹೊಸ ರೂಪದಲ್ಲಿ ವಿಷಯಗಳನ್ನು ಕೊಟ್ಟಾಗ ಆಕರ್ಷಿಕತರಾಗಿ ಓದಿನ ಕಡೆ ಹೆಚ್ಚು ಗಮನ ಕೊಡುತ್ತಾರೆನ್ನುವ ಉದ್ದೇಶವಿಟ್ಟುಕೊಂಡು ಬುತ್ತಿ ಪಾಸಿಂಗ್ ಪ್ಯಾಕೇಜ್ ತಯಾರಿಸಲಾಗಿದೆ. ವಿಜ್ಞಾನ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಇದು ಪ್ರಯೋಜನಕಾರಿಯಾಗಲಿದೆ ಎಂದರು.
ಕಡ್ಲೆಗುದ್ದು ಶ್ರೀ ಆಂಜನೇಯಸ್ವಾಮಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಡಾ.ಮಹೇಶ್ ಕೆ.ಎನ್. ಮಾತನಾಡುತ್ತ ಕಲಿಕೆಯಲ್ಲಿ ತೀರ ಹಿಂದುಳಿದಿರುವ ಮಕ್ಕಳಿಗೆ ಸರಳ ಹಾಗೂ ಸುಲಭವಾಗಿ ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಬುತ್ತಿಯನ್ನು ಸಿದ್ದಪಡಿಸಲಾಗಿದೆ. ವಿನೂತನ ಪರಿಕಲ್ಪನೆಯನ್ನಿಟ್ಟುಕೊಂಡು ತಯಾರಿಸಿರುವ ಈ ಪ್ಯಾಕೇಜ್‌ನಲ್ಲಿ ವಿಜ್ಞಾನ ಶಿಕ್ಷಕರುಗಳ ಶ್ರಮ ಅಪಾರವಿದೆ ಎಂದು ಗುಣಗಾನ ಮಾಡಿದರು.
ಶಿಕ್ಷಣ ಸಂಯೋಜಕ ಎಂ.ಆರ್.ನಾಗರಾಜ್ ಮಾತನಾಡಿ ಶಾಲೆಗೆ ಗೈರಾಜರಾಗುವ ಹಾಗೂ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳು ಹತ್ತನೆ ತರಗತಿಯಲ್ಲಿ 35 ಅಂಕಗಳನ್ನು ಪಡೆದು ತೇರ್ಗಡೆಯಾಗಲಿ ಎನ್ನುವ ಉದ್ದೇಶವಿಟ್ಟುಕೊಂಡು ಬುತ್ತಿ ಪಾಕೆಟ್ ಪಾಸಿಂಗ್ ಪ್ಯಾಕೇಜನ್ನು ಸಿದ್ದಪಡಿಸಿದ್ದು, ಮಕ್ಕಳು ಎಲ್ಲಿಯೇ ಇರಲಿ ಇದನ್ನು ಒಮ್ಮೆ ತಿರುವಿ ಹಾಕಿದರೆ ಸಾಕು ತೇರ್ಗಡೆಯಾಗುವುದರಲ್ಲಿ ಅನುಮಾನವಿಲ್ಲ ಎಂದು ಬುತ್ತಿಯ ಮಹತ್ವ ತಿಳಿಸಿದರು.
ಗಾರ್ಡಿಯನ್ ಏಂಜಲ್ ಸ್ಕೂಲ್‌ನ ಮುಖ್ಯ ಶಿಕ್ಷಕಿ ಸವಿತಾ ಡಿ.ಆರ್. ವಾಸವಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಶೋಕ್ ಎ.ಟಿ. ಜಿಲ್ಲಾ ವಿಜ್ಞಾನ ಶಿಕ್ಷಕರ ಕ್ಲಬ್‌ನ ಪದಾಧಿಕಾರಿಗಳು ಈ ಸಂದರ್ಭದಲ್ಲಿದ್ದರು.