ರಾಯಚೂರು: ಮುಂದೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಬಯಲಿಗೆ ಉರುಳಿದ ಘಟನೆ ಜಿಲ್ಲೆಯ ದೇವದುರ್ಗದ ಕೊತ್ತದಡ್ಡಿ ಬಳಿ ನಡೆದಿದೆ. ಘಟನೆಯಲ್ಲಿ ಬಸ್ಸಲ್ಲಿದ್ದವರ ಸ್ಥಿತಿ ಗಂಭೀರವಾಗಿದೆ.

ಅಪಘಾತಕ್ಕೀಡಾದ ಬಸ್ ಪುಣೆಯಿಂದ ಅರಕೇರಾ ಗ್ರಾಮಕ್ಕೆ ಬರ್ತಾ ಇತ್ತು. ಕೊತ್ತದಡ್ಡಿ ಬಳಿ ಬರುತ್ತಿದ್ದಾಗ ಬಸ್ ಎದುರಿಗೆ ಬೈಕ್ ಬಂದಿದೆ. ಬೈಕ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಬಸ್ ಚಾಲಕನಿಗೆ ನಿಯಂತ್ರಣ ತಪ್ಪಿದೆ ಬಸ್ ಬಯಲಿಗೆ ಉರುಳಿದೆ.

ಪರಿಣಾಮ ಬಸ್ಸಿನಲ್ಲಿದ್ದ ಮೂವತ್ತು ಜನರಿಗೆ ಗಾಯಗಳಾಗಿವೆ. ಅದರಲ್ಲಿದ್ದ ಇಬ್ಬರ ಸ್ಥಿತಿ ಗಂಭೀರವಾಗಿದೆ. ಜೀವನೋಪಾಯಕ್ಕೆಂದು ಗುಳೇ ಹೋದವರೇ ಈ ಬಸ್ ನಲ್ಲಿ ಇದ್ದದ್ದು ಎಂದು ತಿಳಿದು ಬಂದಿದೆ. ಗ್ರಾಮದಲ್ಲಿ ಸಂಬಂಧಿಕರೊಬ್ಬರ ಸಾವಿನಿಂದಾಗಿ ಗುಳೇ ಹೋದವರು ಈ ಬಸ್ ನಲ್ಲಿ ಬರುತ್ತಿದ್ದರು. ಈ ಬಸ್ ಅಪಘಾತಕ್ಕೀಡಾಗಿದೆ.


