ಅಂಬೇಡ್ಕರ್ ತತ್ವಾದರ್ಶ ಅಳವಡಿಕೆಯಿಂದ ಸಮ ಸಮಾಜ ನಿರ್ಮಾಣ : ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಗ್

1 Min Read

ಚಿತ್ರದುರ್ಗ, ಏ.15:   ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಾದರ್ಶ ಅಳವಡಿಸಿಕೊಂಡು ಪಾಲಿಸುವ ಮುಖಾಂತರ ಸಮ ಸಮಾಜ, ಜಾತಿ ವ್ಯವಸ್ಥೆ ಮೀರಿದ ಸಮಾಜ ನಿರ್ಮಾಣದಲ್ಲಿ  ಕೈಜೋಡಿಸಲು ಸರ್ವರೂ ದಿಟ್ಟ ಹೆಜ್ಜೆ ಇಡಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳೇಸಿಂಗ್ ಹೇಳಿದರು.

ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾದ  ಅಂಬೇಡ್ಕರ್‍ರವರ 133ನೇ ಜಯಂತಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಅಸ್ಪøಶ್ಯತೆಯಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿ, ಶಿಕ್ಷಣದಿಂದಲೇ ಅಭಿವೃದ್ಧಿ ಸಾಧ್ಯ ಎಂಬ ನಿಲುವು ಹೊಂದಿದ್ದರು ಎಂದು ಹೇಳಿದರು.


ಪ್ರಾದೇಶಿಕ ಸಾರಿಗೆ ಕಛೇರಿ  ಅಧೀಕ್ಷಕ ಹೇಮಂತ್ ಕುಮಾರ್ ಮಾತನಾಡಿ, ನಾವೆಲ್ಲರೂ ತಿಳಿದಿರುವಂತೆ ಅಂಬೇಡ್ಕರ್‍ರವರು ಸಂವಿಧಾನ ಶಿಲ್ಪಿ ಎಂದಷ್ಟೇ. ಅದಲ್ಲದೇ ಅವರು ನುರಿತ ಆರ್ಥಿಕ ತಜ್ಞರೂ ಕೂಡ ಆಗಿದ್ದರು. ಇವರು ಕೈಗೊಂಡ ಅಧ್ಯಯನ ಹಾಗೂ ಇವರಿಗಿರುವ ಜ್ಞಾನಸಂಪತ್ತಿಗೆ ಕೊಲಂಬಿಯಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ವಿದೇಶಿ ವಿದ್ಯಾಲಯದಿಂದ ಪದವಿ ಪಡೆದ ಮೊದಲಿಗನೆಂಬ ಖ್ಯಾತಿ ಅಂಬೇಡ್ಕರ್‍ರವರಿಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ನೀನಾಸಂ ಕಲಾವಿದರು ಹಾಗೂ ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರು ಹಾಗೂ ಇತರೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *