Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸರ್ಕಾರ ಇದ್ದೂ ಸಹಾ ಇಲ್ಲದಂತಾಗಿದೆ :ಬಿ.ಟಿ.ಲಲಿತಾನಾಯ್ಕ್

Facebook
Twitter
Telegram
WhatsApp

 

ಚಿತ್ರದುರ್ಗ,(ಜೂ.10) : ಜನತೆಗೆ ಉತ್ತಮವಾದ ರಸ್ತೆ, ಶುದ್ದವಾದ ಕುಡಿಯುವ ನೀರು, ಮಕ್ಕಳಿಗೆ ಶಿಕ್ಷಣ ಹಾಗೂ ಆರೋಗ್ಯವನ್ನು ನೀಡದ ಸರ್ಕಾರ ಇದ್ದು ಸಹಾ ಇಲ್ಲದಂತೆ, ಇಂದಿನ ಸರ್ಕಾರದಲ್ಲಿ ಭ್ರಷ್ಠಾಚಾರ ಹೆಚ್ಚಾಗಿದೆ. ಮತದಾರರ ಬಗ್ಗೆ ಕಾಳಜಿ ಇಲ್ಲ, ಮುಂದಿನ ಚುನಾವಣೆಯಲ್ಲಿ ಈ ಸರ್ಕಾರದ ಬಗ್ಗೆ ಮತದಾರರು ಉತ್ತಮವಾದ ತೀರ್ಮಾನವನ್ನು ತೆಗೆದುಕೊಳ್ಳಬೇಕಿದೆ ಎಂದು ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ಬಿ.ಟಿ.ಲಲಿತಾನಾಯ್ಕ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಲ್ಲಿ ಭ್ರಷ್ಠಾಚಾರಕ್ಕೆ ಕಡಿವಾಣ ಹಾಕಬೇಕಿದೆ. ಉತ್ತಮವಾದ ರಸ್ತೆಗಳು ಇಲ್ಲ ಜನತೆಗೆ ಶುದ್ದವಾದ ಕುಡಿಯುವ ನೀರು ಸಿಗುತ್ತಿಲ್ಲ ಇದನ್ನು ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಸುಮ್ಮನಿದ್ದ ಶಾಲಾ ಸಮವಸ್ತ್ರದ ಬಗ್ಗೆ ಸರ್ಕಾರ ಇಲ್ಲ-ಸಲ್ಲದ ಗಲಾಭೆಯನ್ನು ಎಬ್ಬಿಸಿ ಶಿಕ್ಷಣದಲ್ಲೂ ಸಹಾ ಧರ್ಮವನ್ನು ತರುವ ಪ್ರಯತ್ನವನ್ನು ಮಾಡುತ್ತಿದೆ. ಈ ಸಮಸ್ಯೆಯನ್ನು ಬೇರೆಡೆಗೆ ತಿರುಗಿಸಲು ಬೇರೆ ಬೇರೆ ಸಮಸ್ಯೆಯನ್ನು ಮತದಾರರ ಮುಂದಿಡುತ್ತಿದೆ. ಮಸೀದಿಯಲ್ಲಿ ಶಿವಲಿಂಗ ಇದೆ ಎಂದು ಹೇಳುವುದರ ಮೂಲಕ ಮಸೀದಿಗಳನ್ನು ತಮ್ಮ ವಶಕ್ಕೆ ಪಡೆಯುವ ಕಾರ್ಯವನ್ನು ಮಾಡುತ್ತಿದೆ ಎಂದು ಆರೋಪಿಸಿದರು.

ಹಿಂದಿನ ಕಾಲದಲ್ಲಿ ಎಲ್ಲರು ಸೇರಿ ಕೂಡಿ ಬಾಳುವೆ ಮಾಡುತ್ತಿದ್ದರು, ಅಗ ಯಾವುದೇ ಜಾತಿ, ಧರ್ಮ ಇರಲಿಲ್ಲಿ ಶಾಲೆಯಲ್ಲಿ ಸಮವಸ್ತ್ರದ ಬಗ್ಗೆ ಚಕಾರ ವಿರಲಿಲ್ಲ ಇಂದಿನ ದಿನಮಾನದಲ್ಲಿ ಶಿಕ್ಷಣವನ್ನು ನೀಡುವಂತ ಶಾಲಾ-ಕಾಲೇಜು, ಜ್ಞಾನವನ್ನು ನೀಡುವಂತ ಗ್ರಂಥಾಲಯಗಳು ಹೆಚ್ಚಾಗಬೇಕಿದೆ.

ಇದರ ಬಗ್ಗೆ ಮಠಗಳು ತಿಳಿಸುವ ಕಾರ್ಯವನ್ನು ಮಾಡಬೇಕಿತ್ತು. ಆದರೆ ಇದನ್ನು ಮಾಡುತ್ತಿಲ್ಲ. ಶಾಲೆಗಳು ಪ್ರಾರಂಭವಾಗಿ ತಿಂಗಳಾದರೂ ಸಹಾ ಪಠ್ಯ ಸಿಕ್ಕಿಲ್ಲ, ಸರ್ಕಾರ ಇದರ ಬಗ್ಗೆ ಆಲೋಚನೆ ಮಾಡಬೇಕಿದೆ ಶೀಘ್ರವಾಗಿ ಮಕ್ಕಳಿಗೆ ಪಠ್ಯವನ್ನು ತಲುಪಿಸುವ ಕಾರ್ಯವನ್ನು ಮಾಡಬೇಕೆಂದು ಸರ್ಕಾರವನ್ನು ಲಲಿತಾನಾಯ್ಕ್ ಒತ್ತಾಯಿಸಿದ್ದಾರೆ.

ರೈತ ದೇಶದ ಬೆನ್ನುಲುಬು ಎಂದು ಎಲ್ಲರು ಹೇಳುತ್ತಾರೆ ಆದರೆ ಆತನ ಬಗ್ಗೆ ಯಾರೂ ಸಹಾ ಗಮನ ನೀಡುತ್ತಿಲ್ಲ, ಆತನ ಕೆಲಸಕ್ಕೆ ಸಹಾಯವಾಗುವ ಗೊಬ್ಬರ, ಬಿತ್ತನೆ ಬೀಜದ ಸಹಾಯಧನವನ್ನು ಸಹಾ ಸರ್ಕಾರಗಳು ನೀಡುತ್ತಿಲ್ಲ, ಆತನ ಬಗ್ಗೆ ಯಾವ ಸರ್ಕಾರಗಳು ಸಹಾ ಆಲೋಚನೆ ಮಾಡುತ್ತಿಲ್ಲ, ನಮ್ಮ ಸರ್ಕಾರ ಆಧಿಕಾರಕ್ಕೆ ಬಂದಲ್ಲಿ ಮೊದಲು ರೈತನಿಗೆ ಆದ್ಯತೆಯನ್ನು ನೀಡಲಾಗುವುದು.

ಸರ್ಕಾರ ಜಾರಿ ಮಾಡಲು ಉದ್ದೇಶಸಿದ್ದ ಎಪಿಎಂಸಿ ಕಾಯ್ದೆ ರೈತರಿಗೆ ಉಪಯೋಗವಾಗುತ್ತಿಲ್ಲ ಆದರ ಉಪಯೋಗ ಬಂಡವಾಳ ಶಾಹಿಗಳಿಗೆ ಮಾತ್ರ ಆಗುತ್ತಿತ್ತು. ಮತದಾರಲ್ಲಿ ಆರಿವು ಮತ್ತು ಪ್ರಜ್ಞೆಯನ್ನು ಮೂಡಿಸುವ ಕಾರ್ಯವನ್ನು ನಮ್ಮ ಪಕ್ಷದವತಿಯಿಂದ ಮಾಡಲಾಗುತ್ತದೆ ಎಂದರು.

ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ನಾಗೇಶ್ ಮಾತನಾಡಿ, ನಮ್ಮ ಪಕ್ಷದಲ್ಲಿ ಉತ್ತಮವಾದ ನಾಯಕರಿದ್ದು ನಾಡಿಗೆ ಉತ್ತಮವಾದ ಆಡಳಿತವನ್ನು ನೀಡಿದ್ದಾರೆ ಉತ್ತಮವಾದ ಇತಿಹಾಸವನ್ನು ಹೊಂದಿದ ಪಕ್ಷವಾಗಿದ್ದು, ಇದನ್ನು ಮುಂದುವರೆಸಬೇಕೆಂಬ ದೃಷ್ಟಿಯಿಂದ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವ ಕಾರ್ಯ ನಡೆಯುತ್ತಿದೆ. ಬೇರೆ ಪಕ್ಷಗಳು ಬಂಡವಾಳ ಶಾಹಿಗಳನ್ನು ಅಥವಾ ತೋಳ್ಬಲವನ್ನು ಹೊಂದಿದವರನ್ನು ಆಯ್ಕೆ ಮಾಡುತ್ತದೆ ಆದರೆ ನಮ್ಮ ಪಕ್ಷ ತುಳಿತಕ್ಕೆ ಒಳಗಾದವರನ್ನು ಆಯ್ಕೆ ಮಾಡುವುದರ ಮೂಲಕ ಆವರಿಗೆ ಧ್ವನಿಯಾಗಿ ಕೆಲಸ ಮಾಡುತ್ತದೆ ಎಂದರು.

ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಾಜ್ಯಯ ಪ್ರವಾಸವನ್ನು ಮಾಡಲಾಗುತ್ತಿದ್ದು ಮುಂದಿನ ಚುನಾವಣೆಯಲ್ಲಿ 224 ಕ್ಷೇತ್ರಗಳಿಗೆ ಸಹಾ ಜನತಾ ಪಾರ್ಟಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಲಿದೆ. ಇದರ ಬಗ್ಗೆ ಈಗಾಗಲೇ ಉತ್ತಮವಾದ ಆಭ್ಯರ್ಥಿಗಳ ಆಯ್ಕೆ ಕಾರ್ಯ ನಡೆಯುತ್ತಿದೆ. ಮುಂದಿನ ಆರು ತಿಂಗಳಲ್ಲಿ 150 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಪ್ರಕಟ ಮಾಡಲಾಗುವುದು. ಉಳಿದಂತೆ ಮುಂದಿನ ದಿನದಲ್ಲಿ ಉಳಿದ ಕ್ಷೇತ್ರದ ಆಯ್ಕೆ ಕಾರ್ಯ ನಡೆಯಲಿದೆ ಎಂದ ಅವರು, ನಮ್ಮ ಪಕ್ಷಕ್ಕೆ ಬೇರೆ ಬೇರೆ ಪಕ್ಷದ ಹಲವಾರು ನಾಯಕರುಗಳು ಸೇರ್ಪಡೆಯಾಗುತ್ತಿದ್ದಾರೆ. 2023ರ ವಿಧಾನಸಭಾ ಚುನಾವಣೆ ಜನತಾ ಪಾರ್ಟಿಗೆ ದಿಕ್ಸೂಚಿಯಾಗಲಿದೆ ಎಂದರು.

ಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುಮೂರ್ತಿ, ಜಿಲ್ಲಾಧ್ಯಕ್ಷ ಕೆ.ಎಂ.ಲೋಕೇಶ್, ಮಹಿಳಾ ಜಿಲ್ಲಾಧ್ಯಕ್ಷ ಬಿ.ಗೀತಾಂಜಲಿ, ರಾಜ್ಯ ಸದಸ್ಯತ್ವ ಸಮಿತಿ ಅಧ್ಯಕ್ಷ ಪಾಲಾಕ್ಷಪ್ಪ, ರಾಜ್ಯ ಕಾರ್ಯಧ್ಯಕ್ಷ ರಫೀಕ್, ರಾಜ್ಯ ಕಾರ್ಯದರ್ಶೀ ಮಹಡಿಕ್ ಬಾಲರಾಜ್, ಪ್ರಕಾಶ್, ಸಾಕಮ್ಮ, ಮಂಜುನಾಥ್, ಆನಂತಮೂರ್ತಿ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈರುಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ : ಗ್ರಾಹಕರು ಕಂಗಾಲು..!

ಬೆಂಗಳೂರು: ಈರುಳ್ಳಿ ಬೆಲೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಇದು ಮನೆಯಲ್ಲಿ ಅಡುಗೆ ಮಾಡುವವರ ಪಾಲಿಗೆ, ಹೊಟೇಲ್ ಉದ್ಯಮಿಗಳಿಗೆ ಹೆಚ್ಚು ತಲೆ ನೋವಾಗಿದೆ. ಹೀಗೆ ದಿನನಿತ್ಯ ಬಲಸುವ ಪದಾರ್ಥಗಳು ಹೀಗೆ ಬೆಲೆ ಏರಿಕೆಯಾಗುತ್ತಲೇ ಇದ್ದರೆ

ಮಹಿಳೆಯರೆ ಎಚ್ಚರ : ಚಿತ್ರದುರ್ಗದಲ್ಲಿ ಕಾಂಪೌಂಡ್ ಗೆ ನುಗ್ಗಿ ಚಿನ್ನದ ಸರ ಕದ್ದ ಖದೀಮರು..!

ಚಿತ್ರದುರ್ಗ: ಚಿನ್ನದ ಸರ ಕದಿಯುವ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಪೊಲೀಸರು ಕೂಡ ಸಾಕಷ್ಟು ಎಚ್ಚರಿಕೆ ವಹಿಸಿದ್ದಾರೆ, ಜನರಿಗೆ ಜಾಗೃತಿ ಮೂಡಿಸಿದ್ದಾರೆ. ಆದರೂ ಕಳ್ಳರು ಮಾತ್ರ ತಮ್ಮ ಕೈಚಳಕವನ್ನು ತೋರಿಸುತ್ತಲೆ ಇದ್ದಾರೆ. ರಸ್ತೆಯಲ್ಲಿ ಹೋಗುವಾಗ, ಒಂಟಿ ಹೆಂಗಸರನ್ನ

3 ಕ್ಷೇತ್ರಗಳ ಉಪಚುನಾವಣೆಯ ಮತದಾನ ಆರಂಭ : ಕಣದಲ್ಲಿರೋದು ಎಷ್ಟು ಅಭ್ಯರ್ಥಿಗಳು..?

ಬಾರೀ ಕುತೂಹಲಕ್ಕೆ ಕಾರಣವಾಗಿದ್ದ ಉಪಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಇಂದು ಬೆಳಗ್ಗೆ 7 ಗಂಟೆಯಿಂದಾನೇ ಮತದಾನ ಶುರುವಾಗಿದೆ. ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಘಟಾನುಘಟಿ ನಾಯಕರು ಅಖಾಡದಲ್ಲಿದ್ದು, ಈಗ ಅಗ್ನಿಪರೀಕ್ಷೆಗೆ ನಿಂತಿದ್ದಾರೆ.

error: Content is protected !!