ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ವಿಷಯ ಪ್ರಸ್ತಾಪ : ಭ್ರಮೆಯಲ್ಲಿರಬೇಡಿ ಎಂದ ಬಿಎಸ್ವೈ

1 Min Read

 

ಚಿಕ್ಕಬಳ್ಳಾಪುರ: ಇಂದು ದೊಡಬಳ್ಳಾಪುರದಲ್ಲಿ ಜನಸ್ಪಂದನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿಯ ಎಲ್ಲಾ ಸಚಿವರು, ಶಾಸಕರು, ಕಾರ್ಯಕರ್ತರು ಸೇರಿದ್ದಾರೆ. ಈ ವೇಳೆ ಭಾಷಣ ಮಾಡಿದ ಮಾಜಿ ಸಿಎಂ ಯಡಿಯೂರಪ್ಪ ಅವರು, ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.

ರಾಹುಲ್ ಗಾಂಧಿ ಅವರು ಬಡತನದ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಕುಟುಂಬದಲ್ಲಿ ಈಗಾಗಲೇ ಮೂರು ಜನ ಪ್ರಧಾನಿಯಾಗಿ ಹೋಗಿದ್ದಾರೆ. ಆದರೆ ಬಡತನ ಮಾಯವಾಯಿತೇನು. ಆದ್ರೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಯೋಜನೆಗಳನ್ನು ತಂದಿದ್ದಾರೆ. ಇನ್ನು ಮುಂದೆಯೂ ಹಲವು ಯೋಜನೆಗಳನ್ನು ತರುತ್ತಾರೆ ಎಂದಿದ್ದಾರೆ.

ಸಿದ್ದರಾಮಯ್ಯ ಅವರು ಹೇಳುತ್ತಾರೆ ಬೋಟ್ ನಲ್ಲಿ ಓಡಾಡುವ ಸ್ಥಿತಿ ಬಂದಿದೆ ಅಂತಾರೆ. ಸಿದ್ದರಾಮತ್ಯ ಅವರೇ ನೀವೂ ಮುಖ್ಯಮಂತ್ರಿಯಾಗಿದ್ದವರು. ಬೋಟ್ ನಲ್ಲಿ ಓಡಾಡುವಂತ ಸ್ಥಿತಿ ಬಂದಿದೆ ಅಂದ್ರೆ ಬೆಂಗಳೂರಿನಲ್ಲಿ ಯಾವ ಹಂತದ ಮಳೆ ಬಂದಿದೆ ಎಂದು ನೀವೂ ಊಹೆ ಮಾಡಿಕೊಳ್ಳುತ್ತೀರಾ ತಾನೇ. ಆದರೆ ಸುಮ್ಮನೆ ನಮ್ಮ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದೀರಾ ಮಾಡುತ್ತೀರಿ. ಇದಕ್ಕೆಲ್ಲಾ ವಿಧಾನಮಂಡಲ ಅಧಿವೇಶನ ಆರಂಭವಾದಾಗ ಇದೆಲ್ಲದಕ್ಕೂ ಉತ್ತರ ನೀಡುತ್ತೇವೆ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ನಾನು ವಿಧಾನಮಂಡಲದ ಒಳಗೆ ಹೇಳಿದ್ದೆ. ಮೋದಿಯವರು ಎಲ್ಲಿಯವರೆಗೂ ಪ್ರಧಾನಿಯಾಗಿರುತ್ತಾರೆ. ಅಲ್ಲಿಯ ತನಕ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡುವುದಿಲ್ಲ. ಕೂಸು ಹುಟ್ಟುವುದಕ್ಕೆ ಮುಂಚೆ ನಾನು ಮುಖ್ಯಮಂತ್ರಿ ಅಂತ ಕಿತ್ತಾಟ ಶುರು ಮಾಡಿದ್ದೀರಾ. ಆದ್ರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಬಿಡುವುದಿಲ್ಲ ಎಂದಿದ್ದಾರೆ. ಯಾವುದೋ ಭ್ರಮೆಯಲ್ಲಿ ಸಿದ್ದರಾಮಯ್ಯ ಅವರು ಹಾಗೂ ಡಿಕೆಶಿವಕುಮಾರ್ ಇದ್ದಾರೆ. ಆದರೆ ಭ್ರಮೆಯಿಂದ ಹೊರಗೆ ಬನ್ನಿ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *