ಕಲಬುರಗಿ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅಪಾಯಕ್ಕೆ ಸಿಲುಕಿತ್ತು. ಇದು ಭದ್ರತಾ ಲೋಪ ಎಂದೇ ಹೇಳಲಾಗಿತ್ತು. ಆದರೆ ಇದೀಗ ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿದ್ದು ಯಾಕೆ ಎಂಬುದು ಗೊತ್ತಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೆಲ್ಲಾ ವೈರಲ್ ಆಗಿದೆ. ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿದ್ದನ್ನು ಕಂಡು ಒಂದು ಕ್ಷಣ ಎಲ್ಲರೂ ಆತಂಕಗೊಂಡಿದ್ದರು. ಜೇವರ್ಗಿಯ ಹೊರ ವಲಯದಲ್ಲಿ ಈ ಘಟನೆ ನಡೆದಿದೆ.
ಹೆಲಿಪ್ಯಾಡ್ ಬಳಿ ಜಮೀನು ಇದೆ. ಆ ಜಮೀನಿನಲ್ಲಿ ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಡಬ್ಬಗಳನ್ನು ಸಂಗ್ರಹಿಸಲಾಗಿದೆ. ಹೆಲಿಕಾಪ್ಟರ್ ಲ್ಯಾಂಡ್ ಆಗುವ ವೇಳೆ ಗಾಳಿಯ ರಭಸಕ್ಕೆ ಅವೆಲ್ಲಾ ಹಾರಿ ಬಂದಿವೆ. ಇದನ್ನು ಗಮನಿಸಿದ ಪೈಲೆಟ್ ಲ್ಯಾಂಡ್ ಮಾಡದೆ ಹೆಲಿಕಾಪ್ಟರ್ ಅನ್ನು ಮೇಲಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಅಲ್ಲಿಯೇ ಇದ್ದ ಭದ್ರತಾ ಸಿಬ್ಬಂದಿಗಳು ಅದನ್ನು ತೆರವುಗೊಳಿಸಿದ ಬಳಿಕ ಹೆಲಿಕಾಪ್ಟರ್ ಲ್ಯಾಂಡ್ ಆಗಿದೆ.
ಸದ್ಯ ಈ ಘಟನೆಯಿಂದ ಯಾವುದೆ ಅನಾಹುತವಾಗಿಲ್ಲ. ಪ್ಲಾಸ್ಟಿಕ್ ಚೀಲಗಳಿಂದಾಗಿ ಇಂಥದ್ದೊಂದು ಘಟನೆ ನಡೆದಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.