ಅಪ್ಪುಗೆ ರಾಜ್ಯ ಪ್ರಶಸ್ತಿ ನೀಡಿದ್ದು ಇನ್ನು ನೆನಪಿದೆ : ಯಡಿಯೂರಪ್ಪ ಭಾವುಕ..!

suddionenews
1 Min Read

ಬೆಂಗಳೂರು: ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಪುನೀತ್ ನಮನ ಕಾರ್ಯಕ್ರಮ ಅರಮನೆ ಆವರಣದಲ್ಲಿ ನಡೆಯುತ್ತಿದೆ. ಇದೇ ಕಾರ್ಯಕ್ರಮದಲ್ಲಿ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಹಳೆಯ ದಿನಗಳನ್ನ ಮೆಲುಕು ಹಾಕಿದ್ದಾರೆ.

ಡಾ. ರಾಜ್ ಕುಮಾರ್ ನಂತ್ರ ಕನ್ನಡಕ್ಕಾಗಿ ಕೆಲಸ ಮಾಡಿದ ಅದ್ಭುತ ಚೇತನ ಅಂದ್ರೆ ಅದು ಅಪ್ಪು. ನಾನು ಸಿಎಂ ಆಗಿದ್ದಾಗ ಪುನೀತ್ ಗೆ ರಾಜ್ಯ ಪ್ರಶಸ್ತಿ ನೀಡಿದ್ದು ಇನ್ನು ನೆನಪಿದೆ. ಕರುನಾಡ ರಾಜರತ್ನ ಪುನೀತ್ ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಬೆಟ್ಟದ ಹೂ ಸಿನಿಮಾದಲ್ಲೇ ಆ ವಯಸ್ಸಿಗೆ ಪುನೀತ್ ರಾಷ್ಟ್ರ ಪ್ರಶಸ್ತಿ ಪಡೆದವರು.

ಅಪ್ಪು ಹಲವರಿಗೆ ಪ್ರೇರಣೆಯೂ ಆಗಿದ್ದಾರೆ. ರಾಜ್‍ಕುಮಾರ್ ಅಗಲಿದಾಗ ಎಷ್ಟು ಜನ ಸೇರಿದ್ದರೋ ಪುನೀತ್ ದೈವದೀನರಾದಾಗ ಅಷ್ಟೆ ಜನ ಸೇರಿದ್ದರು. ರಾಜ್ ಕುಮಾರ್ ಅವರಿಗೆ ಸಿಕ್ಕ ಪ್ರೀತಿ, ವಿಶ್ವಾಸವೇ ಪುನೀತ್ ಗೂ ಸಿಕ್ಕಿದೆ ಎಂದು ಪುನೀತ್ ನಮನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಎಲ್ಲವನ್ನು ನೆನೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *