ಬಿಎಸ್ವೈ ಯುಗಾಂತ್ಯ ಎಂದುಕೊಳ್ಳುವಾಗಲೇ ಕುತೂಹಲ ಮೂಡಿಸಿತು ಮೋದಿ ಭೇಟಿ..!

ನವದೆಹಲಿ: ಕರ್ನಾಟಕ ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಗಟ್ಟಿ ನಾಯಕ. ರೈತರ ನಾಯಕ, ಬಿಜೆಪಿಯನ್ನು ಕಟ್ಟಿ ಬೆಳೆಸಿದ ಬೀಷ್ಮನಾಯಕ. ಆದರೆ ಇತ್ತಿಚೆಗೆ ಪಕ್ಷದ ನಾಯಕರು ಅವರನ್ನು ಸೈಡ್ ಲೈನ್ ಮಾಡುತ್ತಿದ್ದಾರೆ. ಕೆಲವೊಂದು ಬೆಳವಣಿಗೆ ಬಿಎಸ್ವೈ ಅವರ ಬೇಸರಕ್ಕೂ ಕಾರಣವಾಗಿದೆ. ಆದರೆ ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಿದಷ್ಟು ಬಿಜೆಪಿಗೆ ತೊಂದರೆ ಎಂಬುದನ್ನು ಹೈಕಮಾಂಡ್ ನಾಯಕರು ಅರಿಯುವುದರಲ್ಲಿ ಹಿಂದೆ ಉಳಿದಿಲ್ಲ.

ಕರ್ನಾಟಕ ರಾಜಕೀಯದಲ್ಲಿ ಬಿಎಸ್ವೈ ಚಾಪ್ಟರ್ ಅಧಿಪತದತ್ತ ಸೇರ್ಪಡೆಯಾಗುತ್ತಿದೆ ಎನ್ನುವಷ್ಟರಲ್ಲಿ ಕುತೂಹಲದ ಘಟ್ಟ ಸಿಕ್ಕಿದೆ. ಹೈಕಮಾಂಡ್ ನಿಂದ ಯಡಿಯೂರಪ್ಪ ಅವರಿಗೆ ಮಾತ್ರ ಬುಲಾವ್ ಬಂದಿದೆ. ದೆಹಲಿಗೆ ಹೋದ ಬಿಎಸ್ವೈ, ಪ್ರಧಾನಿ ಮೋದಿ ಬಳಿ 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಸದ್ಯ ಕರ್ನಾಟಕದಲ್ಲೂ ಬಿಜೆಪಿಯನ್ನು ಈ ಬಾರಿ ಅಧಿಕಾರಕ್ಕೆ ತರುವುದು ಟಾರ್ಗೆಟ್ ಆಗಿದೆ. ಹೀಗಾಗಿ ಇರುವ ಶಮನವನ್ನು ಕಡಿಮೆ ಮಾಡಬೇಕೆಂದು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಸಿಎಂ ಸ್ಥಾನವನ್ನು ಬಿಟ್ಟುಕೊಟ್ಟ ಬಳಿಕ ಬಿಎಸ್ ಯಡಿಯೂರಪ್ಪ ಅವರು ಹಿಂದೆ ಸರಿದಿದ್ದರು. ಹಲವು ಅಸಾಮಧಾನಗಳಿಂದ ಬೇಸತ್ತಿದ್ದರು. ಇದೆಲ್ಲವನ್ನು ಅರಿತಿದ್ದ ಪ್ರಧಾನಿ ಮೋದಿ, ಇಂದು ಅವರನ್ನು ಕರೆಸಿ ಸಮಾಧಾನ ಮಾಡುವ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಯಾಕಂದ್ರೆ ಯಡಿಯೂರಪ್ಪ ಅವರನ್ನು ಕಡೆಗಣಿಸಿದರೆ ಪಕ್ಷಕ್ಕೆ ಹಿನ್ನಡೆಯಾಗುವುದು ಗ್ಯಾರಂಟಿ ಎಂಬುದನ್ನು ಅರಿತಿದ್ದಾರೆ.

ಬಳಿಕ ಮಾತನಾಡಿದ ಯಡಿಯೂರಪ್ಪ ಅವರು, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 140 ಸ್ಥಾನಗಳನ್ನು ಗೆಲ್ಲುತ್ತೇವೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಶತಸಿದ್ಧ ಎಂದು ಹೇಳಿದ್ದಾರೆ. ಆದರೆ ಪ್ರಧಾನಿ ಮೋದಿ ಬಳಿ ಚರ್ಚೆಯಾದ ಯಾವೊಂದು ವಿಚಾರವನ್ನು ಹಂಚಿಕೊಂಡಿಲ್ಲ.

Share This Article
Leave a Comment

Leave a Reply

Your email address will not be published. Required fields are marked *