Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಠದ ಅನುದಾನಕ್ಕೂ ಕಮಿಷನ್ : ದಿಂಗಾಲೇಶ್ಚರ ಸ್ವಾಮೀಜಿ ಆರೋಪಕ್ಕೆ ಬಿಎಸ್ವೈ ಹೇಳಿದ್ದು ಹೀಗೆ..!

Facebook
Twitter
Telegram
WhatsApp

 

ದಾವಣಗೆರೆ: ಮಠಗಳಿಗೆ ಅನುದಾನ ನೀಡಬೇಕಾದರೂ ಕಮಿಷನ್ ಕೊಡಬೇಕು ಎಂಬ ವಿಚಾರಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಇದಕ್ಕೆ ಆಗಲೇ ಮುಖ್ಯಮಂತ್ರಿಗಳು ಹೇಳಿದ್ದಾರೆ. ಯಾರಿಗೆ ಎಷ್ಟು ಕೊಟ್ಟಿದ್ದೀರಿ ಎಂಬ ದಾಖಲೆಗಳನ್ನು ಮೊದಲು ಕೊಡಿ, ತಕ್ಷಣ ಕ್ರಮ ತೆಗೆದುಕೊಳ್ಳುತ್ತೇನೆ ಅಂತ ಕೇಳಿದ್ದಾರೆ. ಒಬ್ಬ ಮಠಾಧಿಪತಿಯಾಗಿ ಬೇಜಾವಬ್ದಾರಿಯಿಂದ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವಂತದ್ದಲ್ಲ. ನಿಜಕ್ಕೂ ಅದು ಸತ್ಯವೇ ಆಗಿದ್ದರೆ, ದುವಿಟ್ಟು ವಾಸ್ತವದ ಸ್ಥಿತಿಯನ್ನು ಹೇಳಿ. ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಸಿಎಂ ಹೇಳಿದ್ದಾರೆ.

ಇನ್ನು ಈಶ್ವರಪ್ಪ ಅವರ ಬಗ್ಗೆ ಮಾತನಾಡಿ, ಈಶ್ವರಪ್ಪ ಅವರು ಯಾವುದೇ ಅಪರಾಧ ಮಾಡದೇಯೆ ಬೇರೆ ಕಾರಣಕ್ಕಾಗಿ ರಾಜೀನಾಮೆ ಕೊಡುವಂತ ಅನಿವಾರ್ಯತೆ ಬಂತು. ನನಗೆ ವಿಶ್ವಾಸವಿದೆ. ಅವರು ಆರೋಪದಿಂದ ಬೇಗ ಮುಕ್ತರಾಗಿ, ಮತ್ತೊಮ್ಮೆ ಮಂತ್ರಿಯಾಗಿ ಅದೇ ಸ್ಥಾನಕ್ಕೆ ಬರುತ್ತಾರೆ ಎಂಬ ವಿಶ್ವಾಸವಿದೆ. ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಹ ಪಕ್ಷದ ಸಂಘಟನೆ ದೃಷ್ಟಿಯಿಂದ ಯಾವ ಕೆಲಸವನ್ನು ಮಾಡಬೇಕೋ ಆ ಕೆಲಸ ಮುಂದುವರೆಸಿದ್ದಾರೆ.

ರಾಜೀನಾಮೆ ಕೊಟ್ಟ ಕೂಡಲೇ ಯಾವುದು ಬದಲಾವಣೆಯಾಗಲ್ಲ. ಅವರು ನಮ್ಮ ಜೊತೆಗೇನೆ ಇದ್ದಾರೆ. ಅವರನ್ನು ಹೋಗಿ ಮಾತನಾಡಿಸಿ, ಬರಯತ್ತೀದ್ದೀವಿ. ತನಿಖೆಗೆ ಆದೇಶ ಮಾಡಿದ್ದಾರೆ. ನಮಗೆ ಗೊತ್ತಿರುವ ಪ್ರಕಾರ ಅವರು ಯಾವುದೇ ಅಪರಾಧ ಮಾಡಿಲ್ಲ. ತನಿಖೆ ನಡೆಯಲಿ. ವಿಚಾರ ಆಗ ಹೊರಗೆ ಬರುತ್ತೆ ಎಂದು ಈಶ್ವರಪ್ಪ ಪರ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಜೇನುತುಪ್ಪ ಬಳಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ ?

ಸುದ್ದಿಒನ್ : ಜೇನುತುಪ್ಪದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಜೇನುತುಪ್ಪದಿಂದ ಅನೇಕ ಪ್ರಯೋಜನಗಳಿವೆ. ಜೇನು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಎಲ್ಲಾ ಔಷಧೀಯ ಗುಣಗಳನ್ನು ಹೊಂದಿದೆ.  ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಜೇನು ತುಂಬಾ ಆರೋಗ್ಯಕಾರಿ.

ಈ ರಾಶಿಯವರು ಅಪಾರ ಖಜಾನೆ ಸಂಪತ್ತು ಹೊಂದಿರುವರು.

ಈ ರಾಶಿಯವರು ಅಪಾರ ಖಜಾನೆ ಸಂಪತ್ತು ಹೊಂದಿರುವರು. ಈ ರಾಶಿಯವರು ಬಯಸಿದ್ದೆಲ್ಲಾ ಪಡೆಯುವ ಆಶಾವಾದಿಗಳು.   ಸೋಮವಾರ ರಾಶಿ ಭವಿಷ್ಯ -ಮೇ-13,2024 ಸೂರ್ಯೋದಯ: 05:48, ಸೂರ್ಯಾಸ್ತ : 06:36 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ

ಚಳ್ಳಕೆರೆ | ರೈತ ಆತ್ಮಹತ್ಯೆ

ಸುದ್ದಿಒನ್, ಚಳ್ಳಕೆರೆ, ಮೇ. 12 : ತಾಲೂಕಿನ ಬಾಲೇನಹಳ್ಳಿ ಗ್ರಾಮದ ಮೋಹನ್ ಕುಮಾರ್(36) ಎಂಬ ರೈತ ಬೆಳಗಾಗಿ ಮಾಡಿದ ಸಾಲವನ್ನು ತೀರಿಸಲಾಗದೆ ಭಾನುವಾರ ಬೆಳಗಿನ ಜಾವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ

error: Content is protected !!