ಸುದ್ದಿಒನ್, ಬೆಂಗಳೂರು ಮೇ.07 : ನಾಡಿನ ಹಿರಿಯ ಪತ್ರಕರ್ತ ಪ್ರಹ್ಲಾದ್ ಕುಳಲಿ ನಿಧನರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಾಡಿನ ಹಿರಿಯ ಪತ್ರಕರ್ತರಾದ ಪ್ರಹ್ಲಾದ್ ಕುಳಲಿ ಅವರ ನಿಧನವಾರ್ತೆ ದುಃಖವುಂಟುಮಾಡಿದೆ. 1956ರಲ್ಲಿ ಪತ್ರಕರ್ತರಾಗಿ ವೃತ್ತಿಜೀವನ ಆರಂಭಿಸಿ, ಆರೇಳು ದಶಕಗಳ ಕಾಲ ಪತ್ರಿಕಾಧರ್ಮಕ್ಕೆ, ಸಾಮಾಜಿಕ ಮೌಲ್ಯಗಳಿಗೆ ಬದ್ಧರಾಗಿ ಸೇವೆಗೈದ ಹಿರಿಯ ಜೀವವೊಂದನ್ನು ಕಳೆದುಕೊಂಡು ಪತ್ರಿಕಾರಂಗ ಹಾಗೂ ಸಮಾಜ ಬಡವಾಗಿದೆ ಎಂದು ಹೇಳಿದ್ದಾರೆ.

ಮೂಲತಃ ಬೆಳಗಾವಿಯವರಾಗಿದ್ದ ಪ್ರಹ್ಲಾದ್ ಅವರು ಸಂಯಕ್ತ ಕರ್ನಾಟಕ ಪತ್ರಿಕೆಯಲ್ಲಿ 40 ವರ್ಷಕ್ಕೂ ಹೆಚ್ಚುಕಾಲ ಸೇವೆ ಸಲ್ಲಿಸಿ, ಸ್ಥಾನಿಕ ಸಂಪಾದಕರಾಗಿ ನಿವೃತ್ತರಾಗಿದ್ದರು. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ನಾಡಿನ ಹಿರಿಯ ಪತ್ರಕರ್ತರಾದ ಪ್ರಹ್ಲಾದ್ ಕುಳಲಿ ಅವರ ನಿಧನವಾರ್ತೆ ದುಃಖವುಂಟುಮಾಡಿದೆ. 1956ರಲ್ಲಿ ಪತ್ರಕರ್ತರಾಗಿ ವೃತ್ತಿಜೀವನ ಆರಂಭಿಸಿ, ಆರೇಳು ದಶಕಗಳ ಕಾಲ ಪತ್ರಿಕಾಧರ್ಮಕ್ಕೆ, ಸಾಮಾಜಿಕ ಮೌಲ್ಯಗಳಿಗೆ ಬದ್ಧರಾಗಿ ಸೇವೆಗೈದ ಹಿರಿಯ ಜೀವವೊಂದನ್ನು ಕಳೆದುಕೊಂಡು ಪತ್ರಿಕಾರಂಗ ಹಾಗೂ ಸಮಾಜ ಬಡವಾಗಿದೆ.
ಮೂಲತಃ ಬೆಳಗಾವಿಯವರಾಗಿದ್ದ ಪ್ರಹ್ಲಾದ್… pic.twitter.com/6kXLZGwPWa
— Siddaramaiah (@siddaramaiah) May 7, 2026










