ಬ್ರೇಕಿಂಗ್: ಲಕ್ನೋದ ಐಷಾರಾಮಿ ಹೋಟೆಲ್‌ನಲ್ಲಿ ಬೆಂಕಿ : ಇಬ್ಬರ ಸಾವು.. ಕಟ್ಟಡದೊಳಗೆ ಸಿಲುಕಿದ 5 ಮಂದಿ..!

ಲಕ್ನೋದ ಹೋಟೆಲ್‌ನಲ್ಲಿ ಸಂಭವಿಸಿದ ಬೆಂಕಿಯಲ್ಲಿ ನಿವಾಸಿಗಳು ಸಿಲುಕಿಕೊಂಡಿದ್ದಾರೆ. ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಈ ಹೋಟೆಲ್ ಲಕ್ನೋದ ಹಜರತ್‌ಗಂಜ್ ಪ್ರದೇಶದಲ್ಲಿದೆ. ಸ್ಥಳೀಯ ಮೂಲಗಳ ಪ್ರಕಾರ, ಸೋಮವಾರ ಬೆಳಗ್ಗೆ ಗೋಮತಿ ನದಿಯ ಬಳಿಯ ಐಷಾರಾಮಿ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಅವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಹಲವಾರು ಜನರು ಒಳಗೆ ಸಿಲುಕಿಕೊಂಡಿದ್ದಾರೆ. ರಕ್ಷಣಾ ಸಿಬ್ಬಂದಿ ಕಿಟಕಿ ಒಡೆದು ಅವರನ್ನು ಹೊರತರಲು ಪ್ರಯತ್ನಿಸುತ್ತಿದ್ದಾರೆ.

ಸುದ್ದಿ ಸಂಸ್ಥೆ ಎಎನ್‌ಐ ಬಿಡುಗಡೆ ಮಾಡಿರುವ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ದೃಶ್ಯ ಸೆರೆಯಾಗಿದೆ. ಹೋಟೆಲ್‌ನ ಎಲ್ಲಾ ಕಡೆಯಿಂದಲೂ ಕಪ್ಪು ಹೊಗೆ ಆವರಿಸಿಕೊಂಡಿದೆ. ಹಲವಾರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಕಾರ್ಯ ಮಾಡುತ್ತಿವೆ.

ಸುಸಜ್ಜಿತ ಐದು ಅಂತಸ್ತಿನ ಹೋಟೆಲ್‌ನ ನಾಲ್ಕು ಮಹಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದವರು ಪ್ರಜ್ಞಾಹೀನ ನಿವಾಸಿಗಳನ್ನು ಹೋಟೆಲ್ ಕಿಟಕಿಗಳಿಂದ ಹೊರಗೆಳೆದ್ದಾರೆ. ಈ ಲಕ್ನೋ ಹೋಟೆಲ್ ನಗರದ ಹೃದಯಭಾಗದಲ್ಲಿದೆ. ಸಿಕಂದರ್ ಬಾಗ್, ಚತ್ತರ್ ಮಂಜಿಲ್ ಅರಮನೆ ಮತ್ತು ನವಾಬ್ ವಾಝೇದ್ ಅಲಿ ಶಾ ಝೂಲಾಜಿಕಲ್ ಗಾರ್ಡನ್ ಇಲ್ಲಿಂದ ಬಹಳ ಹತ್ತಿರದಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *