ಬೆಂಗಳೂರು: ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರ ಮನೆಯಲ್ಲಿ ಬ್ರೇಕ್ ಫಾಸ್ಟ್ ಸವಿದು ಬಂದಿದ್ದರು ಡಿಕೆ ಶಿವಕುಮಾರ್. ಅಂದು ಒಗ್ಗಟ್ಟಿನ ಮಂತ್ರವನ್ನು ಜಪಿಸಿದ್ದರು. ಆ ಬೆನ್ನಲ್ಲೇ ಇಂದು ಡಿಕೆ ಶಿವಕುಮಾರ್ ಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಲಾಗಿದೆ. ಕುರ್ಚಿ ಕದನದ ನಡುವೆ ಬ್ರೇಕ್ ಫಾಸ್ಟ್ ಮೀಟಿಂಗ್ ಗಳು ನಡೆಯುತ್ತಾ ಇದೆ. ಡಿಕೆ ಶಿವಕುಮಾರ್ ಮನೆಯಲ್ಲಿ ನಾಟಿ ಕೋಳಿ ಸಾರು, ಇಡ್ಲಿ, ವಡೆ, ಉಪ್ಪಿಟ್ಟು ಸವಿದು, ಮಾತುಕತೆ ನಡೆಸಿದ್ದಾರೆ.
ಈ ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಸಿದ್ದರಾಮಯ್ಯ ಅವರ ಜೊತೆಗೆ ಡಿಕೆ ಶಿವಕುಮಾರ್, ಡಿಕೆ ಸುರೇಶ್, ಶಾಸಕ ರಂಗನಾಥ್ ಕೂಡ ಭಾಗಿಯಾಗಿದ್ದರು. ಎಲ್ಲರು ಖುಷಿಯಿಂದ ಬ್ರೇಕ್ ಫಾಸ್ಟ್ ಸವಿದರು. ಆದರೆ ಡಿಕೆ ಶಿವಕುಮಾರ್ ಮಾತ್ರ ನಾಟಿಕೋಳಿ ಸಾಂಬಾರ್ ತಿಂದಿಲ್ಲ. ಕಳೆದ ಕೆಲವು ವರ್ಷಗಳಿಂದ ಡಿಕೆ ಶಿವಕುಮಾರ್ ಅವರು ನಾನ್ ವೆಜ್ ತಿನ್ನುವುದನ್ನ ಬಿಟ್ಟಿದ್ದಾರೆ ಎಂಬ ಮಾತಿದೆ.
ಸಿಎಂ ಕುರ್ಚಿಗಾಗಿ ಇಬ್ಬರ ಕಿತ್ತಾಟ ದೊಡ್ಡ ಮಟ್ಟಕ್ಕೆ ಹೋಗಿತ್ತು. ಅದರಲ್ಲೂ ಬಣಗಳು ಸಹ ಸೃಷ್ಟಿಯಾಗಿದ್ದವು. ಡಿಕೆ ಶಿವಕುಮಾರ್ ಬಣ, ಹೈಕಮಾಂಡ್ ತನಕವೂ ಹೋಗಿತ್ತು. ನಮ್ಮ ನಾಯಕರನ್ನ ಸಿಎಂ ಮಾಡಲೇಬೇಕು. ಸರ್ಕಾರ ರಚನೆಗೆ ಅವರ ಶ್ರಮವು ಇದೆ ಅಂಯತ ತಿಳಿಸಿದ್ರು. ಇತ್ತ ಸಿದ್ದರಾಮಯ್ಯ ಅವರ ಬೆಂಬಲಿಗರು ಸಿದ್ದರಾಮಯ್ಯ ಅವರಿಗೆ ಸಪೋರ್ಟ್ ಮಾಡುವ ಮಾತುಗಳನ್ನ ಆಡ್ತಾ ಇದ್ರು. CLP ಸಭೆಯಲ್ಲಿ ಈ ರೀತಿಯ ನಿರ್ಧಾರಗಳು ಆಗಿಲ್ಲ. ಅವರೇ ಐದು ವರ್ಷ ಸಿಎಂ ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿಯೇ ಹೈಕಮಾಂಡ್ ನಾಯಕರು ಸಾಮರಸ್ಯ ಸಾಧಿಸಲು ಪ್ರಯತ್ನ ಪಡ್ತಿದೆ. ಅದರ ಭಾಗವಾಗಿಯೇ ನಡೆಯುತ್ತಿರೋದು ಬ್ರೇಕ ಫಾಸ್ಟ್ ಮೀಟಿಂಗ್.
