ಚಿತ್ರದುರ್ಗ, ಮಾ.27 : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (ಎಕೆಬಿಎಂಎಸ್) ಚುನಾವಣೆ ಏಪ್ರಿಲ್ 13 ರಂದು ನಡೆಯಲಿದ್ದು, ರಾಜ್ಯ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಯಾಗಿ ಡಾ. ಭಾನುಪ್ರಕಾಶ ಶರ್ಮ ಮತ್ತು ಇವರ ತಂಡದಿಂದ ಚಿತ್ರದುರ್ಗ ಜಿಲ್ಲಾ ಜನ ಪ್ರತಿನಿಧಿ ಸ್ಥಾನದ ಅಭ್ಯರ್ಥಿಯಾಗಿ ಟಿ.ಕೆ. ನಾಗರಾಜ್ ರಾವ್ ಅವರು ಬೆಂಗಳೂರಿನ ಗಾಯತ್ರಿ ಭವನದ ಕೇಂದ್ರ ಕಚೇರಿಯಲ್ಲಿ ಬುಧವಾರ ತಮ್ಮ ನಾಮಪತ್ರವನ್ನು ಮುಖ್ಯ ಚುನಾವಣಾಧಿಕಾರಿ ಎನ್. ವೆಂಕಟೇಶ್ ಅವರಿಗೆ ಸಲ್ಲಿಸಿದರು.

ಈ ಸಮಯದಲ್ಲಿ ಚಿತ್ರದುರ್ಗದ ಶ್ರೀ ಹರಿವಾಯುಗುರು ಸೇವಾ ಟ್ರಸ್ಟ್ (ರಿ)ದ ಉಪಾಧ್ಯಕ್ಷ ರಾದ ವಾಸುದೇವ ರಾವ್ ದಂಪತಿಗಳು, ಕಾರ್ಯದರ್ಶಿಗಳಾದ ಹುಲಿರಾಜ್ ಜೋಯ್ಸ್, ಸಂಘಟನಾ ಕಾರ್ಯದರ್ಶಿ ಪ್ರಸನ್ನ ಕುಮಾರ್ ಪದಕಿ, ಶ್ರೀಮತಿ ಪುಷ್ಪಾoಜಲಿ,AKBMS ಸದಸ್ಯರು ಹಾಗೂ ಬೃಂದಾವನ ಭಜನಾ ಮಂಡಳಿ ಅಧ್ಯಕ್ಷರು ಲಕ್ಷ್ಮೀ ಶ್ರೀ ಮಾರುತಿ ಹಾಜರಿದ್ದು ಶುಭಕೋರಿದರು.


