ಬೆಂಗಳೂರು: ಬಿಪಿಎಲ್ ಕಾರ್ಡ್ ನಿಜವಾದ ಫಲಾನುಭವಿಗಳಿಗೆ ಸಿಗದ, ದೊಡ್ಡಮಟ್ಟದ ಆಸ್ತಿ ಇರುವವರ ಬಳಿಯೂ ಇದೆ ಎಂಬ ಆರೋಪ ನಿನ್ನೆ ಮೊನ್ನೆಯದ್ದಲ್ಲ. ಕಾರ್ಡ್ ಗಳ ಪರಿಶೀಲನೆ ಮಾಡಲಾಗುವುದು ಎಂದು ಸಾಕಷ್ಟು ಬಾರಿ ಸರ್ಕಾರ ಕೂಡ ಹೇಳಿದೆ. ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಆಹಾರ ಸಚಿವರಾಗಿರುವ ಕೆ ಎಚ್ ಮುನಿಯಪ್ಪ ಈ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ.
ಸ್ವಂತ ಕಾರು ಇದ್ದರೆ ಅಂದ್ರೆ ವೈಟ್ ಬೋರ್ಡ್ ಕಾರು ಇದ್ದರೆ ಅಂತವರಿಗೆ ಬಿಪಿಎಲ್ ಕಾರ್ಡ್ ನೀಡುವುದಿಲ್ಲ. ಎಲ್ಲೋ ಬೋರ್ಡ್ ಇದ್ದವರಿಗೆ ಅನುಮತಿ ನೀಡಲಾಗುತ್ತದೆ. ಯಾಕಂದ್ರೆ ಅವರು ಯಾವುದೋ ಕಮಿಂಟ್ಮೆಂಟ್ ನಲ್ಲೊರುತ್ತಾರೆ, ಬಾಡಿಗೆ ಕಟ್ಟುತ್ತಾರೆ. ಅವರಿಗೆ ಅನುಮತಿ ಇದೆ. ಇನ್ನು ಕೆಲವರ ಬಳಿ ಬಿಪಿಎಲ್ ಕಾರ್ಡ್ ಇರುತ್ತದೆ. ಅವರಿಗೆ ಅದರ ಅಗತ್ಯವೇ ಇರುವುದಿಲ್ಲ. ಆದರೂ ಕಾರ್ಡ್ ಇಟ್ಟುಕೊಂಡಿರುತ್ತಾರೆ. ಆ ರೀತಿಯ ಪ್ರಕರಣವನ್ನು ಸೂಕ್ತ ತನಿಖೆ ನಡೆಸುವುದಕ್ಕೆ ಹೇಳಿದ್ದೇವೆ ಎಂದಿದ್ದಾರೆ.
ಇನ್ನು ಈ ಹಿಂದೆ ಆಹಾರ ಸಚಿವರಾಗಿದ್ದ ಉಮೇಶ್ ಕತ್ತಿ ಅವರು ಕೂಡ ಬೈಕ್, ಪ್ರಿಡ್ಜ್ ಇದ್ದವರಿಗೆ ಬಿಪಿಎಲ್ ಕೊಡುವ ಅಗತ್ಯವಿಲ್ಲ ಎಂದಿದ್ದರು. ಇದೀಗ ಕಾರು ಇದ್ದವರಿಗೆ ಕೊಡಲು ಆಗುವುದಿಲ್ಲ ಎನ್ನುತ್ತಿದ್ದಾರೆ. ಇದರ ಜೊತೆಗೆ ಈಗಾಗಲೇ 1 ಕೋಟಿ ಕುಟುಂಬಗಳಿಗೆ ಹಣ ಹಾಕಿದ್ದೇವೆ. ಬ್ಯಾಂಕ್ ಗಳ ಮೂಲಕ
ಒಬ್ಬ ವ್ಯಕ್ತಿಗೆ ಮೊದಲೇ ನಿರ್ಧರಿಸಿದಂತೆ ಆ ಹಣ ತಲುಪಿಸಿದ್ದೇವೆ. ಹೊಸ ಪಡಿತರ ಚೀಟಿ ಪಡೆಯಲು ಅನುಮತಿ ನೀಡಿದ್ದೇವೆ. ಶೀಘ್ರದಲ್ಲಿ ಆ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.