ಗದಗದಲ್ಲಿ ಅತಿಥಿ ಶಿಕ್ಷಕನಿಂದ ಬಾಲಕನಿಗೆ ಥಳಿತ : ವಿದ್ಯಾರ್ಥಿ ಸಾವು..!

suddionenews
1 Min Read

 

 

ಗದಗ: ವಿದ್ಯಾರ್ಥಿಗಳಿಗೆ ಹೊಡೆದು, ಬಡಿದು ಶಿಕ್ಷೆ ನೀಡಿದರೆ ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಚೆನ್ನಾಗಿ ಕಲಿತು, ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ. ಆದರೆ ಶಿಕ್ಷಕರ ಹೊಡೆತ ಮಕ್ಕಳ ಪ್ರಾಣವನ್ನು ಬಲಿ ಪಡೆಯಬಾರದು. ಗದಗ ಜಿಲ್ಲೆಯಲ್ಲಿ ಶಿಕ್ಷಕರ ಥಳಿತಕ್ಕೆ ಬಾಲಕನೊಬ್ಬ ಬಲಿಯಾಗಿರುವ ಘಟನೆ ನಡೆದಿದೆ. 4 ವರ್ಷದ ಭರತ್ ಎಂಬಾತ ಸಾವನ್ನಪ್ಪಿರುವ ವಿದ್ಯಾರ್ಥಿ.

ನರಗುಂದ ತಾಲೂಕಿನ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯಲ್ಲಿ ಈ ಘಟನೆ ನಡೆದಿದೆ. ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮೇಲೆ ಅತಿಥಿ ಶಿಕ್ಷಕ ಮುತ್ತಪ್ಪ ಹಲ್ಲೆ ನಡೆಸಿದ್ದಾರೆ. ಇವರ ಹೊಡೆತಕ್ಕೆ ಭರತ್ ಚಿಕತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ವಿದ್ಯಾರ್ಥಿ ಮಾತ್ರವಲ್ಲ ಈತನ ಸೈಕೋ ಕೆಲಸಕ್ಕೆ ಸಹ ಶಿಕ್ಷಕಿ, ಗೀತಾ ಬಾರಕೇರಿ ಕೂಡ ಹಲ್ಲೆಗೊಳಗಾಗಿದ್ದಾರೆ‌. ಘಟನಾ ಸ್ಥಳಕ್ಕೆ ನರಗುಂದ ಪೊಲೀಸರು ಬೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *