ಸಾಲಗಾರರು ನಿಗಧಿತ ಸಮಯಕ್ಕೆ ಅಸಲು ಮತ್ತು ಬಡ್ಡಿ ಪಾವತಿಸಿ, ಸಂಘದ ಏಳಿಗೆಗೆ ಸಹಕರಿಸಿ : ಅಧ್ಯಕ್ಷ ಹೆಚ್.ಜಲೀಲ್‍ಸಾಬ್

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.20 : ಸದಸ್ಯರ ಸಹಕಾರದಿಂದ ವಿಶ್ವಮಾನವ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘ ಅಭಿವೃದ್ದಿಯತ್ತ ಮುನ್ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಲಾಭಾಂಶ ಕಾಣಬಹುದು ಎಂದು ಸಂಘದ ಅಧ್ಯಕ್ಷ ಹೆಚ್.ಜಲೀಲ್‍ಸಾಬ್ ತಿಳಿಸಿದರು.

ಎ.ಪಿ.ಎಂ.ಸಿ. ಆವರಣದಲ್ಲಿರುವ ಐ.ಎ.ಟಿ. ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ವಿಶ್ವಮಾನವ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘದ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

589 ಸದಸ್ಯರುಗಳಿದ್ದು, ಏಳು ಲಕ್ಷ 95 ಸಾವಿರ ರೂ. ಷೇರು ಬಂಡವಾಳವಿದೆ. 22 ಮಂದಿ ಸದಸ್ಯತ್ವ ಪಡೆದುಕೊಂಡಿದ್ದಾರೆ. 4 ಲಕ್ಷ 51 ಸಾವಿರದ 250 ರೂ. ಠೇವಣಿಯಿದ್ದು, 7.5 ಲಕ್ಷ ರೂ.ಗಳ ಸಾಲ ನೀಡಲಾಗಿದೆ. ಸಾಲಗಾರರು ನಿಗಧಿತ ಸಮಯಕ್ಕೆ ಸರಿಯಾಗಿ ಅಸಲು ಮತ್ತು ಬಡ್ಡಿಯನ್ನು ಪಾವತಿಸಿ ಸಂಘದ ಏಳಿಗೆಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಸಾಲಗಾರರಷ್ಟೆ ಜಾಮೀನುದಾರರ ಮೇಲೆ ಜವಾಬ್ದಾರಿಯಿದೆ ಎನ್ನುವುದನ್ನು ಮರೆಯಬಾರದು. ಸಣ್ಣ ಪ್ರಮಾಣದ ನಿರೀಕ್ಷೆ ಮುಟ್ಟಿದರೆ ಸಮಾಜಕ್ಕೆ ಉಪಯುಕ್ತವಾದ ಸಹಾಯ ಮಾಡಲು ಆಗುತ್ತದೆ. ವಿಶ್ವಮಾನವ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘಕ್ಕೆ ಶಕ್ತಿ ಬರಬೇಕಾದರೆ ಠೇವಣಿ, ಷೇರುದಾರರು ಜಾಸ್ತಿಯಾಗಬೇಕು. ಠೇವಣಿ ಹಣಕ್ಕೆ ಯಾವುದೇ ರೀತಿಯ ಧಕ್ಕೆ ಬಾರದಂತೆ ನಿಭಾಯಿಸುತ್ತೇವೆ. ಅನುಮಾನ ಪಡುವುದು ಬೇಡ. ಚಳ್ಳಕೆರೆ, ಹಿರಿಯೂರು, ಚಿಕ್ಕಜಾಜೂರಿನಲ್ಲಿ ಶಾಖೆ ತೆರೆಯಬೇಕೆಂದುಕೊಂಡಿದ್ದೇವೆ. ನಮ್ಮ ವಹಿವಾಟು ಸರಿಯಾಗಿದ್ದರೆ ವರ್ಷಕ್ಕೊಮ್ಮೆ ಸರ್ವ ಸದಸ್ಯರ ಸಭೆ ಕರೆದು ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲಾಗುತ್ತದೆ. ಸದಸ್ಯರು ಸಕ್ರಿಯವಾಗಿ ವ್ಯವಹಾರಗಳಲ್ಲಿ ಭಾಗಿಯಾಗಬೇಕೆಂದು ಹೇಳಿದರು.

ವಿಶ್ವಮಾನವ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎಸ್.ರಶೀದ್, ನಿರ್ದೇಶಕರುಗಳಾದ ಸಿ.ಇಮಾಂಸಾಬ್, ಎಚ್.ಮೌಲಾನ ತಾಳವಟ್ಟಿ, ಇ.ಮಹಮದ್ ಅಲಿ, ಜಿ.ಸುಭಾನು, ಹೆಚ್.ಅಬ್ದುಲ್ ಲತೀಫ್, ಷೇಕ್‍ಬುಡೇನ್‍ಸಾಬ್, ಎಂ.ಜಿ.ಶಫಿವುಲ್ಲಾ, ಪಿ.ದಾದಾವಲಿ, ಪಿ.ಬಷೀರ್ ಅಹಮದ್, ಟಿ.ಮೆಹಬೂಬ್, ಜಿ.ದಾದಾಬುಡೇನ್‍ಸಾಬ್, ಎಂ.ಅಬ್ದುಲ್ ಕಲಾಂ, ಪಿ.ಸಲೀಮಾ, ಜಹರಾಬಿ, ಕಾರ್ಯದರ್ಶಿ ಕು.ಸಿಂಧು ವಿ. ವೇದಿಕೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *