ಮುಂಬೈ: ಹನುಮಾನ್ ಚಾಲೀಸಾ ಪಠಣಕ್ಕೆ ಸಂಬಂಧಿಸಿದಂತೆ ಸಂಸದೆ ನವನೀತ್ ಹಾಗೂ ಶಾಸಕ ರಾಣಾಗೆ ಇಂದು ಜಾಮೀನು ಮಂಜೂರಾಗಿದೆ. ಇಬ್ಬರ ಮೇಲೂ ದೇಶದ್ರೋಹದ ಕೇಸು ರಿಜಿಸ್ಟರ್ ಆಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶ ಹೊರ ಹಾಕಿರುವ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಸರ್ಕಾರದ ನಿರ್ಧಾರ ಒಂದು ಮೂರ್ಖತನ ಎಂದಿದ್ದಾರೆ.
ಹನುಮಾನ್ ಚಾಲೀಸಾ ಪಠಿಸಿದರು ಎಂಬ ಕಾರಣಕ್ಕೆ ಯಾರನ್ನಾದರೂ ಬಂಧಿಸುವುದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಇದು ಸರ್ಕಾರದ ಮೂರ್ಖತನ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ರಾಣಾ ದಂಪತಿ ಸಿಎಂ ಉದ್ಧವ್ ಠಾಕ್ರೆ ಮನೆ ಮುಂದೆ ಏಪ್ರಿಲ್ 27 ರಂದು ಹನುಮಾನ್ ಚಾಲೀಸಾ ಪಠಿಸಲು ಮುಂದಾಗಿದ್ದರು. ಜೊತೆಗೆ ಸಿಎಂ ಮೇಲೆ ಟೀಕೆ ಮಾಡಿದ್ದರು. ಹೀಗಾಗಿ ದಂಪತಿ ವಿರುದ್ಧ 124ಎ ಕಾಯ್ದೆಯಡಿ ದೇಶದ್ರೋಹ ಪ್ರಕರಣ ರಿಜಿಸ್ಟರ್ ಮಾಡಲಾಗಿತ್ತು. 10 ದಿನಗಳ ಬಳಿಕ ಜಾಮೀನು ಪಡೆದು ಹೊರಗೆ ಬಂದಿದ್ದಾರೆ.






GIPHY App Key not set. Please check settings