ಮಂಡ್ಯ: ಒಂದು ವಾಟ್ಸಾಪ್ ಮೆಸೇಜನ್ನು ಅವರ ಸ್ನೇಹಿತರಿಗೆ ಕಳುಹಿಸಿದ್ದಾರೆ. ನನ್ನ ಸಾವಿಗೆ ಈಶ್ವರಪ್ಪನೇ ನೇರ ಕಾರಣ ಅಂತ ಬರೆದ ಮೇಲೆ ಅವರೇ ಕಾರಣ ಅಲ್ವಾ. ಈಶ್ವರಪ್ಪ ಒಬ್ಬ ಕೊಲೆಗಡುಕ. ಬೊಮ್ಮಾಯಿ ಅವರ ಸರ್ಕಾರ ಕೊಲೆಗಡುಕ ಸರ್ಕಾರ. ಅವರ ತಮ್ಮ ಪ್ರಶಾಂತ್ ಪಾಟೀಲ್ ಅಂತ ಹೇಳಿ, ದೂರು ನೀಡಿದ್ದಾರೆ. ಅದರಲ್ಲಿ ಸರಿಯಾಗಿ ಹೇಳಿದ್ದಾರೆ. ಈಶ್ವರಪ್ಪ ನಮ್ಮ ಅಣ್ಣನ ಹತ್ರ 40% ಕಮೀಷನ್ ಕೇಳಿದ್ರು ಅಂತ ಅವರ ತಮ್ಮನೇ ಹೇಳಿದ್ದಾರೆ.
ನಾನು ಡಿಕೆ ಶಿವಕುಮಾರ್ ಬೆಳಗಾವಿಗೆ ಹೋಗಿದ್ದೆವು. ಅಲ್ಲಿ ಸಂತೋಷ್ ಹೆಂಡತಿ ಹಾಗೂ ಅವರ ತಾಯಿಯನ್ನು ಭೇಟಿ ಮಾಡಿದ್ದಾಗ ಆ ಇಬ್ಬರು ಹೇಳಿದ್ದರು ಈಶ್ವರಪ್ಪ ನನ್ ಹತ್ರ 49% ಕಮಿಷನ್ ಕೇಳ್ತಾ ಇದ್ದಾರೆ. ನಾನು ಅದನ್ನು ಎಲ್ಲಿ ತಗೊಂಡು ಬರಲಿ, ಕೆಲಸ ಮಾಡಿಸೋದಕ್ಕೆ ಸಾಲ ಮಾಡಿದ್ದೀನಿ, ಒಡವೆ ಇಟ್ಟಿದ್ದೀನಿ ಎಲ್ಲಿಂದ ತಂದು ಕೊಡಲಿ ಅಂದಿದ್ದರು ಅಂತ ಆ ಇಬ್ಬರು ನನಗೆ ಹೇಳಿದ ಮಾತು.
ಈಶ್ವರಪ್ಪ ಹೇಳ್ತಾರೆ, ಆ ಕೆಲಸ ಮಂಜೂರೇ ಆಗಿಲ್ಲ ಅಂತ. ಮಂಜೂರು ಆಗದೆ ಇದ್ದಿದ್ರೆ ಕೆಲಸ ಮಾಡೋದಕ್ಕೆ ಹೇಳಿದೆ. ಆ ಕೆಲಸ ಮಾಡಿದ್ದಕ್ಕೆ ಸಾಕ್ಷಿ ಪಂಚಾಯ್ತಿಯ ಅಧ್ಯಕ್ಷ. ಬಿಲ್ ಕೊಡಿ ಅಂತ ಕೂಡ ಹೇಳಿದ್ದೆ ಅಂದ್ರು. ಇದ್ಕಿಂತ ಸಾಕ್ಷಿಬೇಕಾ. ಮತ್ತೆ ಈಶ್ವರಪ್ಪರನ್ನು ಬಂಧಿಸಬೇಕಾ ಬೇಡವಾ, ರಾಜೀನಾಮೆ ಕೊಡಿಸಬೇಕಾ ಬೇಡವಾ. ಕುಮಾರಸ್ವಾಮಿ ಹೇಳ್ತಾರೆ ಅವ್ರನ್ನ ಯಾಕೆ ಬಂಧಿಸಬೇಕು ಅಂತ. ಮರ್ಡರ್ ಮಾಡಿ ಬಿಡ್ತೀಯಾ, ರಾಜೀನಾಮೆ ಕೊಟ್ಟರೆ ಕ್ಷಮಿಸಿ ಬಿಟ್ಟರೆ ಸರಿ ಹೋಗಿ ಬಿಡುತ್ತೆ ಅಲ್ವಾ..? ಅವ್ರ ಮೇಲೆ ಕೇಸ್ ರಿಜಿಸ್ಟರ್ ಆಗಿರುವುದು ಸೆಜ್ಷನ್ 34, 306 ಅದಕ್ಕೆ ಶಿಕ್ಷೆ ಗೊತ್ತಾ.. ಹತ್ತು ವರ್ಷಗಳು ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.