ಬೆಂಗಳೂರು: ಬಸವರಾಜ್ ಬೊಮ್ಮಾಯಿ ಸಿಎಂ ಆಗಿ ಇಂದಿಗೆ ನೂರು ದಿನ. ಈ ನೂರು ದಿನದ ಸಂಭ್ರಮವನ್ನ ಭರ್ಜರಿಯಾಗಿ ಆಚರಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಹಾನಗಲ್ ಉಪಚುನಾವಣೆಯ ಸೋಲು ಆ ಖುಚಿಯನ್ನ ಕಿತ್ತುಕೊಂಡಿದೆ. ಹಾನಗಲ್ ಕ್ಷೇತ್ರ ಸೋತ ಬಳಿಕ ಸಿಎಂ ಬೊಮ್ಮಾಯಿ ಅವರು ಉತ್ಸಾಹ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಮೂರು ದಿನಗಳ ಹುಬ್ಬಳ್ಳಿ ಪ್ರವಾಸಕ್ಕೆ ತೆರಳಿದ ಬಸವರಾಜ್ ಬೊಮ್ಮಾಯಿ, ಮೂರು ದಿನಗಳ ಕಾಲ ಹುಬ್ಬಳ್ಳಿಯಲ್ಲೇ ಇದ್ದು, ಸೋಲಿನ ಆತ್ಮಾವಲೋಕನ ಮಾಡಲಿದ್ದಾರೆ.
ಇನ್ನು ಈ ಬೇಸರದ ನಡುವೆಯೇ ಹೈಕಮಾಂಡ್ ಕೂಡ ಬಸವರಾಜ್ ಬೊಮ್ಮಾಯಿ ಅವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಯಾಕಂದ್ರೆ ಹಾನಗಲ್ ಸಿಎಂ ತವರು ಜಿಲ್ಲೆಯಾಗಿದೆ. ಅಲ್ಲಿಯೆ ಬಿಜೆಪಿ ಸೋತಿದ್ದು, ಹೈಕಮಾಂಡ್ ಅಸಮಾಧಾನಕ್ಕೆ ಕಾರಣವಾಗಿದೆ.
ನಾಯಕತ್ವ ಕೊರತೆಯ ಬಗ್ಗೆ ಮಾಹಿತಿ ಪಡೆಯಲು, ರಾಜ್ಯಕ್ಕೆ ಭೇಟಿ ನೀಡುವಂತೆ ಅರುಣ್ ಸಿಂಗ್ ಗೆ ಸೂಚನೆ ನೀಡಲಾಗಿದೆ. ಹೀಗಾಗಿ ೮ ರಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದಾರೆ ಅನ್ನೋ ಮಾಹಿತಿ ಇದೆ. ನ.೯ ರಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಲಿದ್ದು, ಆ ಸಭೆಯಲ್ಲಿ ಸೋಲಿನ ಕಾರಣಗಳು,ನಾಯಕತ್ವ ಕೊರತೆಯ ಬಗ್ಗೆ ಪರಾಮರ್ಶೆ ಮಾಡುವ ಸಾಧ್ಯತೆ ಇದೆ.