ಚಿತ್ರದುರ್ಗ : ಕಾಂಗ್ರೆಸ್ ಸರಕಾರ RSS ನ್ನು ತಾಕತ್ತಿದ್ರೆ ಮುಟ್ಟಲಿ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಚೆಲುವರಾಯಸ್ವಾಮಿ ಅವರು, RSS ನ್ನು ನಾವು ಬ್ಯಾನ್ ಮಾಡುತ್ತೇವೆ ಎಂದು ನಾವುಗಳು ಎಲ್ಲಿಯೂ ಹೇಳಿಲ್ಲ. ಸಾರ್ವಜನಿಕ ಹಾನಿ ಮಾಡಿದ ಸಂಘ ಯಾವುದೇ ಇದ್ರೂ ಕ್ರಮ ಅಂತಾ ಹೇಳೀದ್ದಿವಿ ಎಂದಿದ್ದಾರೆ.
ಕಾಂಗ್ರೆಸ್ ನವರು ಬಚ್ಚಾಗಳು ಎಂಬ ಆರ್. ಅಶೋಕ್ ಹೇಳಿಕೆಗೆ ಕಿಡಿ ಕಾರಿದ ಕೃಷಿ ಸಚಿವರು ನಾವೆಲ್ಲ ಬಚ್ಚಾಗಳಾ ? ಸರಿಯಪ್ಪಾ ಸಾಮ್ರಾಟ್ ನಿನಗೆ ತುಂಬಾ ಧನ್ಯವಾದಗಳು. ನಮ್ಮನ್ನೆಲ್ಲ ಭಸ್ಮ ಮಾಡೋ ಶಿವನ ಶಕ್ತಿಯಲ್ಲ ಅಶೋಕ್ ತೆಗೆಕೊಂಡಿದ್ದಾರೆ. ಈಗ ಬ್ರಹ್ಮ, ವಿಷ್ಣು, ಮಹೇಶ್ವರ ಯಾರು ಗೊತ್ತಿಲ್ಲ ಟೈಮ್ ಬರಲಿ ಕಾದು ನೋಡೋಣ ಬಿಡಿ ಎಂದರು.
ಚಿತ್ರದುರ್ಗ ನಗರದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಹೊಡೀತೀಯಾ ಹೊಡಿ ಅಂತಾ ಬರ್ತಾರಲ್ಲ. ಅವರೆಲ್ಲ ಹೊಡಿಯಲ್ಲ, ಆರತ ಇವರ ಪರಿಸ್ಥಿತಿ ಆಗಿದೆ. ಬಿಜೆಪಿಯವರಿಗೆ ಏನೂ ಸಿಗ್ತಿಲ್ಲ, ಅದಕ್ಕೆ ಒಂದೇನಾದ್ರೂ ಹುಡುಕಕ್ಕೆ ಹೋಗ್ತಿದ್ದಾರೆ ಅಷ್ಟೇ, ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕರನ್ನ ಆಯ್ಕೆ ಮಾಡೋಕೆ ಇವರಿಗೆ 6 ತಿಂಗಳು ಬೇಕಾಯ್ತು, ಇವರಿಬ್ಬರ ಸ್ಥತಿ ಈ ಪಾರ್ಲಿಮೆಂಟ್ ಚುನಾವಣೆ ಮುಗಿಲೀ ಗೊತ್ತಾಗುತ್ತೆ ಎಂದರು.
ರಾಜ್ಯದಲ್ಲಿ ಬರಘೋಷಿಸಿದ ನಂತರ ಪರಿಹಾರ ನೀಡುವ ಕಾರ್ಯದಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದಿದ್ದು, ಬೆಳೆಗಳ ಕ್ರಾಪ್ ಸರ್ವೆ ಮುಗಿದು ಅಂತಿಮ ಹಂತದಲ್ಲಿದ್ದು, ಈ ಕುರಿತು ಕೇಂದ್ರಕ್ಕೆ ಸಾಕಷ್ಟು ಒತ್ತಡ ತಂದಿದ್ದೀವಿ ಶೀಘ್ರದಲ್ಲೇ 226 ತಾಲೂಕುಗಳಲ್ಲಿ ಬರ ಪರಿಹಾರ ನೀಡಲಾಗುವುದು ಎಂದರು. ಬೆಳೆ ಪರಿಹಾರ ವಿಚಾರವಾಗಿ ನಾನು, ಸಚಿವ ಪ್ರಯಾಂಕ ಖರ್ಗೆ, ಕೃಷ್ಣಭೈರೇಗೌಡ್ರು ಮುಖ್ಯಮಂತ್ರಿಗಳನ್ನು ಬೇಟಿ ಮಾಡೋಕೆ ಹೋಗಿದ್ವಿ, ಆದರೆ ಭೇಟಿಗೆ ಅವಕಾಶ ನೀಡದ ಹಿನ್ನೆಲೆ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಬಂದಿದ್ದೇವೆ. ಈಗಾಗಲೇ ಹಲವು ಮೆಮೋರಂಡಮ್ ಹಾಗೂ ಪತ್ರ ಬರೆದಿದ್ದೀವಿ ಅಂತಿಮವಾಗಿ ಪ್ರೋಸೆಸ್ ಆಗಿ ಒಂದು ಹಂತಕ್ಕೆ ಬಂದಿದೆ. ನಾವು ಕೊಟ್ಟ ಮೆಮೋತಂಡಮ್ ಗೆ ಇನ್ನೂ ಪತ್ರ ಬಂದಿಲ್ಲ. ನಿನ್ನೆ ರಾತ್ರಿ ಈ ಕುರಿತಂತೆ ನನಗೆ ಮಾಹಿತಿ ಬಂದಿದೆ. ಸಮಯ ಫಿಕ್ಸ್ ಆದ್ರೆ ನಾನು, ಕೃಷ್ಣಭೈರೇಗೌಡ್ರು ಹೋಗುತ್ತವೆ. ಫೈನಾನ್ಸ್ ಮಿನಿಸ್ಟರ್ ಹಂತಕ್ಕೆ ಹೋಗಿದೆ ಅಂದ್ರೆ ಇಂದು ಅಂತಿಮ ಮಾಡಲಾಗುತ್ತದೆ ಎಂದರು.