ಬೆಂಗಳೂರು: ಇಂದು ಸಿಲಿಕಾನ್ ಸಿಟಿಯ 40ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆಯ ಕರೆ ಬಂದಿತ್ತು. ಇದರಿಂದ ಪೋಷಕರು ನಿಜಕ್ಕೂ ಗಾಬರಿಯಾಗಿದ್ದಾರೆ. ಆದರೆ ಈ ಸಂಬಂಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕೊಟ್ಟ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮಧು ಬಂಗಾರಪ್ಪ ಅವರನ್ನು ಫುಲ್ ಟ್ರೋಲ್ ಮಾಡ್ತಾ ಇದ್ದಾರೆ. ಅಷ್ಟೆ ಅಲ್ಲ ಸಾಮಾಜಿಕ ಜಾಲತಾಣದಲ್ಲೂ ಫುಲ್ ವೈರಲ್ ಆಗ್ತಾ ಇದೆ. ಹಾಗಾದ್ರೆ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು ?
ಬೆಂಗಳೂರಿನ ಸುಮಾರು 40 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದು ಸಹಜವಾಗಿಯೇ ಪೋಷಕರಿಗೆ ಆತಂಕ ಸೃಷ್ಟಿಯಾಗಿದೆ. ಆದರೆ ಶಿಕ್ಷಣ ಸಚಿವರೇ ಹಾರಿಕೆ ಉತ್ತರವನ್ನು ನೀಡಿದ್ದಾರೆ. ಇವೆಲ್ಲ ಹೋಕ್ಸ್ ಅಂದ್ರೆ ಹುಸಿ ಕರೆ ಎಂದು ಸಚಿವರು ಹೇಳಿದ್ದಾರೆ. ನಾನು ಬಂದಾಗಲೂ ಇತ್ತು. ಇದೆಲ್ಲ ಮಾತನಾಡುವುದು ತಪ್ಪು. ನೀವೂ ಕೇಳುವುದು ತಪ್ಪು. 40 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಬಗ್ಗೆ ನನಗೆ ಗೊತ್ತಿಲ್ಲ. ಏನು ಇಲ್ಲ. ಕಾನೂನು ಇದೆ. ಕಾನೂನು ನೋಡಿಕೊಳ್ಳುತ್ತದೆ. ಅದೆಲ್ಲ ಬಿಡಿ. ಬೇರೆ ಪಾಠ – ಗೀಠದ್ದು ಇದ್ದರೆ ಹೇಳಿ ಎಂದಿದ್ದಾರೆ.
ಆದರೆ ಈ ರೀತಿಯಾದ ಹೇಳಿಕೆಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗಿದ್ದು, ಟ್ರೋಲ್ ಮಾಡ್ತಾ ಇದ್ದಾರೆ. ಮಕ್ಕಳಿಗೆ, ಪೋಷಕರಿಗೆ ಸಮಾಧಾನ ಹೇಳಬೇಕಾದ ಹುದ್ದೆಯಲ್ಲಿರುವವರೇ ಈ ರೀತಿಯಾದ ಉತ್ತರ ಹೇಳುವುದು ಎಷ್ಟು ಸರಿ. ಅನಾಹುತಗಳು ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದ್ದಾರೆ.
