ಬೆಂಗಳೂರು: ಇತ್ತೀಚೆಗೆ ಬಿಎಂಟಿಸಿ ಬಸ್ ಗೆ ಬೆಂಕಿ ಹೊತ್ತಿಕೊಳ್ಳುವ ಪ್ರಕರಣ ಬ್ಯಾಕ್ ಟು ಬ್ಯಾಕ್ ನಡೆಯುತ್ತಿದೆ. ಮೊನ್ನೆ ಮೊನ್ನೆಯಷ್ಟೇ ನಿಂತಿದ್ದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದೀಗ ಇಂದು ಚಲಿಸುತ್ತಿದ್ದ ಬಸ್ ನಲ್ಲೇ ಬೆಂಕಿ ಹೊತ್ತಿಕೊಂಡಿದೆ.
ಈ ಘಟನೆ ಜಯನಗರದ ಮೆಟ್ರೋ ಸ್ಟೇಷನ್ ಹಿಂಭಾಗ ನಡೆದಿದೆ. ನೋಡ್ ನೋಡ್ತಲೇ ಬಸ್ಸು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದೆ. 15 ಜನರಿದ್ದ ಬಸ್ ಕ್ಷಣಾರ್ಧದಲ್ಲಿ ಹೊತ್ತಿಕೊಂಡು ಆತಂಕ ಸೃಷ್ಟಿಸಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ.
ಈ ಬಸ್ ಮೆಜೆಸ್ಟಿಕ್ ನಿಂದ ಜಯನಗರ ಕಡೆಗೇನೆ ಬರ್ತಾ ಇತ್ತು. ಆದ್ರೆ ಚಲಿಸುತ್ತಿದ್ದಾಗಲೇ ಬಸ್ ನಲ್ಲಿ ಇದ್ದಕ್ಕಿದ್ದ ಹಾಗೇ ಬೆಂಕಿ ಕಾಣಿಸಿಕೊಂಡಿದೆ. ಬಸ್ ನಲ್ಲಿ ಬಂದ ಸೌಂಡ್ ಕೇಳಿ ಅನುಮಾನಗೊಂಡ ಡ್ರೈವರ್ ಕೆಂಪರಾಜು ತಕ್ಷಣ ಬಸ್ ನಿಲ್ಲಿಸಿ, ಎಲ್ಲರನ್ನು ಕೆಳಗಿಳಿಯುವಂತೆ ತಿಳಿಸಿದ್ದಾರೆ. ಎಲ್ಲರೂ ಕೆಳಗಿಳಿದು ನೋಡುತ್ತಲೇ ಬಸ್ ಬೆಂಕಿಗಾಹುತಿಯಾಗಿದೆ. ಸದ್ಯ ಯಾರಿಗೂ ಯಾವ ತೊಂದರೆಯಾಗದೆ ಇದ್ಧದ್ದಕ್ಕೆ ಕಂಡಕ್ಟರ್ ಮತ್ತು ಡ್ರೈವರ್ ನಿಟ್ಟುಸಿರು ಬಿಟ್ಟಿದ್ದಾರೆ.