Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ದಾವಣಗೆರೆಯಲ್ಲಿ ಹರಿದ ನೆತ್ತರು : ರೌಡಿ ಸಂತೋಷ್ ಕೊ* ಹಿಂದೆ ಇರೋದ್ಯಾರು..?

---Advertisement---

ದಾವಣಗೆರೆ: ಬೆಣ್ಣೆ ನಗರದ ಮಂದಿ ಇಂದು ಬೆಚ್ಚಿಬಿದ್ದಿದ್ದಾರೆ. ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ಕಣುಮಾನ್ ನ ಭೀಕರ ಕೊಲೆಯಾಗಿದೆ. ನಗರದ ಸೋಮೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಂಭಾಗ ಈ ಕೊ*ಯಾಗಿದೆ. ರಿಯಲ್ ಎಸ್ಟೇಟ್ ಸೆಟಲ್ಮೆಂಟ್ ಮಾಡಿಕೊಂಡಿದ್ದ ರೌಡಿಶೀಟರ್ ಕಣುಮನನ್ನು ಮರ್ಡರ್ ಮಾಡಲು ನಾಲ್ಕೈದು ಜನ ಆಟೋದಲ್ಲಿ ಬಂದಿದ್ದಾರೆ. ರಸ್ತೆಯಲ್ಲಿಯೇ ಕಣುಮನನ್ನು ಕೊಲೆ ಮಾಡಿದ್ದಾರೆ.

ಆತನನ್ನು ಹಿಂಬಾಲಿಸಿಕೊಂಡು ಬಂದಂತ ಆರೋಪಿಗಳು ಮೊದಲು ರೌಡಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿದ್ದಾರೆ. ಬಳಿಕ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ರೌಡಿ ಕಣುಮನ ಸ್ಥಳದಲ್ಲಯೇ ನರಳಿ ನರಳಿ ಪ್ರಾಣ ಬಿಟ್ಟಿದ್ದಾನೆ. ಆಸ್ಪತ್ರೆಯ ಮುಂದೆಯೇ ಈ ಘಟನೆ ನಡೆದಿದ್ದರು ಸಹ ಆತನನ್ನು ಬದುಕಿಸಲು ಸಾಧ್ಯವಾಗಿಲ್ಲ. ಆಟೋದಲ್ಲಿ ಬಂದಿದ್ದ ನಾಲ್ಕೈದು ಜನರಿಂದ ಹತ್ಯೆಗೀಡಾಗಿದ್ದಾನೆ.

ಘಟನೆಯ ಬಗ್ಗೆ ಗೊತ್ತಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಧಾವಿಸಿದ ವಿದ್ಯಾನಗರ ಪೊಲೀಸರು, ಸ್ಥಳ ಪರೀಶೀಲನೆ ಮಾಡಿ, ಮೃತದೇಹವನ್ನು ಪೋಸ್ಟ್ ಮಾಟಮ್ ಗೆ ರವಾನೆ ಮಾಡಲಾಗಿದೆ. ಸ್ಥಳದಲ್ಲಿ ಪರಿಶೀಲನೆಯನ್ನು ಮಾಡಿದ್ದಾರೆ. ಆರೋಪಿಗಳಿಗಾಗಿ ಇದೀಗ ಹುಡುಕಾಟ ಶುರುವಾಗಿದೆ. ಯಾವ ದ್ವೇಷಕ್ಕೆ ಈ ರೀತಿ ಹತ್ಯೆ ಮಾಡಿದರು..? ಹತ್ಯೆ ಮಾಡಿದವರಿಗೂ ರೌಡಿ ಕುನುಮನಿಗೂ ಏನು ಸಂಬಂಧ ಎಂಬುದೆಲ್ಲವೂ ವಿಚಾರಣೆಯ ಬಳಿಕ ಸತ್ಯ ಹೊರಬೀಳಲಿದೆ.

ಈಗ ಹತ್ಯೆಯಾಗಿರುವ ಸಂತೋಷ್ ಕುಮಾರ್ ಅಲಿಯಾಸ್ ಕುನುಮನು ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗಿದ್ದನು. ಈ ಹಿಂದೆ ಕೊಲೆಯಾಗಿದ್ದ ಬುಳ್ಳ ನಾಗನ ಹತ್ಯೆಯಲ್ಲಿ ಇದೇ ಸಂತೋಷ್ ಹೆಸರು ಕೂಡ ಕೇಳಿ ಬಂದಿತ್ತು. ಇದೀಗ ಬುಳ್ಳ ನಾಗನ ಕಡೆಯವರೇನಾದರೂ ಸೇಡು ತೀರಿಸಿಕೊಂಡರಾ ಎಂಬ ಅನುಮಾನ ವ್ಯಕ್ತವಾಗಿದೆ. ಆರೋಪಿಗಳನ್ನು ವಿಚಾರಣೆ ನಡೆಸಿದ ಬಳಿಕವಷ್ಟೇ ಸತ್ಯಾಸತ್ಯತೆ ಹೊರಗೆ ಬರಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...