ನಾಪತ್ತೆಯಾಗಿರುವ ಮಾಜಿ ಸಚಿವ ಸಿಪಿ ಯೋಗೀಶ್ವರ್ ಬಾವನ ಕಾರಿನಲ್ಲಿ ರಕ್ತದ ಕಲೆಗಳು ಪತ್ತೆ..!

suddionenews
1 Min Read

ರಾಮನಗರ: ಕಳೆದ ಕೆಲ ದಿನಗಳಿಂದ ಮಾಜಿ ಸಚಿವ ಸಿಪಿ ಯೋಗೀಶ್ವರ್ ಅವರ ಬಾವ ನಾಪತ್ತೆಯಾಗಿದ್ದಾರೆ‌. ಈ ಕೇಸ್ ಗೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಪತ್ತೆಯಾದ ಕಾರಿನಲ್ಲಿ ರಕ್ತದ ಕಲೆಗಳು ಕಾಣಿಸಿಕೊಂಡಿವೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಗ್ರಾಮದಲ್ಲಿ ಕಾರು ಪತ್ತೆಯಾಗಿದೆ.

ಸಿಪಿ ಯೋಗೀಶ್ವರ್ ಬಾವ ಅವರ ಕಾರು ರಾಮಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಬಳಿ, ಕಳೆದ ಎರಡು ದಿನಗಳಿಂದ ನಿಂತಿದೆ. ಈ ಕಾರಿನ ಬಳಿ ಈಗಾಗಲೇ ಪೊಲೀಸರು, ಚನ್ನಪಟ್ಟಣ ಡಿವೈಎಸ್ಪಿ ಹಾಗೂ ಮಾಜಿ ಸಚಿವ ಸಿಪಿ ಯೋಗೀಶ್ವರ್ ಭೇಟಿ ನೀಡಿದ್ದಾರೆ. ಈ ವೇಳೆ ಕಾರಿನ ಡಿಕ್ಕಿ ಓಪನ್ ಮಾಡಿದಾಗ ಅದರಲ್ಲಿ ರಕ್ತದ ಕಲೆಗಳು ಪತ್ತೆಯಾಗಿದೆ.

ಇದನ್ನು ಕಂಡು ಪೊಲೀಸರು ತಕ್ಷಣ ಅಲ್ಲಿಯೇ ಇದ್ದ ಸಿಸಿಟಿವಿ ಪರೀಕ್ಷೆ ಮಾಡಿದ್ದಾರೆ. ಜೊತೆಗೆ ಎಫ್ಎಸ್ಎಲ್ ತಂಡ, ಫಿಂಗರ್ ಪ್ರಿಂಟ್ಸ್ ತಂಡ, ಶ್ವಾನ ದಳವನ್ನು ಸ್ಥಳಕ್ಕೆ ಕರೆಸಿದ್ದಾರೆ. ಎಲ್ಲಾ ರೀತಿಯಾದಂತ ಪರೀಕ್ಷೆಯನ್ನು ಮಾಡಿಸುತ್ತಿದ್ದಾರೆ. ಸಿಪಿ ಯೋಗೀಶ್ವರ್ ಅವರ ಬಾವ ಮಹದೇವಯ್ಯ ಡಿಸೆಂಬರ್ 2ರಂದು ನಾಪತ್ತೆಯಾಗಿದ್ದರು. ಬಳಿಕ ಪೊಲೀಸರು ತಂಡಗಳನ್ನು ರಚನೆ ಮಾಡಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕತಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *