ನಾಳೆ ಕರ್ನಾಟಕದಲ್ಲಿ ರಕ್ತಚಂದ್ರಗ್ರಹಣ ಭಾಗಶಃ ಗೋಚರ

1 Min Read

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 02 : ನಾಳೆ (ಮಾರ್ಚ್ 3 ರಂದು) ಸಂಭವಿಸಲಿರುವ ಚಂದ್ರಗ್ರಹಣ ಭಾರತದ ಈಶಾನ್ಯ ರಾಜ್ಯಗಳಲ್ಲಿ ಸಂಪೂರ್ಣವಾಗಿ ಗೋಚರಿಸಲಿದ್ದು, ಕರ್ನಾಟಕದಲ್ಲಿ ಸಂಜೆ ಭಾಗಶಃ ಗೋಚರವಾಗಲಿದೆ.

ಇದು ಮದ್ಯಾಹ್ನ 3.20 ಕ್ಕೆ ಪ್ರಾರಂಭವಾಗಿ ಸಂಜೆ 6.47 ಕ್ಕೆ ಕೊನೆಗೊಳ್ಳಲಿದೆ. ಅಂದರೆ ಕರ್ನಾಟಕದಲ್ಲಿ ಸಂಜೆ ಚಂದ್ರೋದಯದ ಸಮಯದಲ್ಲಿ 6.26 ರಿಂದ 6.46 ರವರೆಗೆ ಭಾಗಶಃ ಕೆಂಪು ಚಂದ್ರನ ಬಿಂಬವನ್ನು 20 ನಿಮಿಷಗಳ ಕಾಲ ಬರಿಗಣ್ಣಿನಲ್ಲಿಯೇ ಪ್ರತಿಯೊಬ್ಬರೂ ನೋಡಬಹುದಾಗಿದೆ. ಯಾವುದೇ ಉಪಕರಣಗಳ ಅಗತ್ಯವೂ ಇಲ್ಲ. ಆಕಾಶದಲ್ಲಿ ನಡೆಯುವ ನೆರಳು ಬೆಳಕಿನ ಆಟಕ್ಕೆ ಯಾರೂ ಆತಂಕ ಪಡಬೇಕಾಗಿಲ್ಲ. ಭೂಮಿಯ ನೆರಳು ಚಂದ್ರನ ಮೇಲೆ ಭಾಗಶಃ ಬೀಳುವುದರಿಂದ ನೆರಳಿನ ಸ್ವಲ್ಪ ಭಾಗವನ್ನು ನೋಡಬಹುದಾಗಿದೆ. ಇದಕ್ಕಾಗಿ ದೇವಸ್ಥಾನಗಳ ಬಾಗಿಲು ಹಾಕುವ ಅವಶ್ಯಕತೆಯೂ ಇಲ್ಲ. ಗ್ರಹಣ ಸಂಭವ ಕಾಲದಲ್ಲಿ ಯಾರ ಮೇಲೆಯೂ ಪ್ರಭಾವವೂ ಇಲ್ಲ. ಮೌಢ್ಯತೆಯನ್ನು ತೊರೆದು ವೈಜ್ಞಾನಿಕವಾಗಿ ಆಲೋಚಿಸಿ ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Enable Notifications OK No thanks