ವರದಿ ಮತ್ತು ಫೋಟೋ
ಸುರೇಶ್ ಪಟ್ಟಣ್,
ಮೊ : 8722022817
ಚಿತ್ರದುರ್ಗ (ಅ. 09) : ರಕ್ತದಾನ ಮಹತ್ವದ್ದು, ಇದಕ್ಕೆ ಪರ್ಯಾಯವಾಗಿ ಏನು ಇಲ್ಲ, ಕೃತಕವಾಗಿ ರಕ್ತವನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ, ಈ ಹಿನ್ನಲೆಯಲ್ಲಿ ಮಾನವರಿಂದಲೇ ರಕ್ತವನ್ನು ಪಡೆಯಬೇಕಿದೆ ಎಂದು ನಗರಸಭಾ ಸದಸ್ಯರಾದ ಚಂದ್ರಶೇಖರ್ ತಿಳಿಸಿದ್ದಾರೆ.
ನಗರದ ಕೋಟೆ ರಸ್ತೆಯ ಬಾರೇ ಇಮಾಮ್ ಯೂತ್ ಬಳಗದವತಿಯಿಂದ 25ನೇ ವರ್ಷದ ಜೆಶ್ನೇ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸರ್ಕಾರಿ ಮಾದರಿ ಬಾಲಕಿಯರ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿದೆ. ಅಪಘಾತಗಳು, ಹೆರಿಗೆ ಸಮಯದಲ್ಲಿ, ಅಪರೇಷನ್ ಸಮಯ ಸೇರಿದಂತೆ ಇತರೆ ಕಡೆಗಳಲ್ಲಿ ಅಗತ್ಯವಾಗಿ ರಕ್ತ ಬೇಕಾಗುತ್ತದೆ. ಆಗ ಹುಡುಕಾಡುವುದಕ್ಕಿಂತ ಈ ರೀತಿಯಾದ ರಕ್ತದಾನ ಶಿಬಿರಗಳನ್ನು ಏರ್ಪಾಡು ಮಾಡಿ ದಾನಿಗಳಿಂದ ರಕ್ತವನ್ನು ಸಂಗ್ರಹ ಮಾಡಿ ಅಗತ್ಯ ಇದ್ದಾಗ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು.
ರಕ್ತಕ್ಕೆ ಯಾವುದೇ ಪಯಾರ್ಯ ಇಲ್ಲ, ಕೃತಕವಾಗಿಯೂ ಸಹಾ ತಯಾರಿಸಲು ಸಾಧ್ಯವಿಲ್ಲ, ಏನಿದ್ದರೂ ಮನುಷ್ಯರಿಂದಲೇ ಪಡಯಬೇಕಿದೆ. ಆರೋಗ್ಯವಂತರಾದವರು ಪ್ರತಿ ನಾಲ್ಕು ತಿಂಗಳಿಗೊಮ್ಮೆ ರಕ್ತವನ್ನು ದಾನ ಮಾಡಬಹುದಾಗಿದೆ. ಮತ್ತೇ ನಾಲ್ಕು ತಿಂಗಳಿಗೆ ರಕ್ತವನ್ನು ದಾನ ಮಾಡಬಹುದಾಗಿದೆ ಈ ಸಮಯಕ್ಕೆ ನಮ್ಮ ದೇಹದಲ್ಲಿ ರಕ್ತ ದಾನ ಮಾಡಿದಷ್ಟು ತಯಾರಾಗುತ್ತದೆ. ರಕ್ತದಾನ ಮಾಡಲು ಯಾವುದೇ ಯಾವುದೇ ವಯಸ್ಸಿನ ನಿರ್ಭಂಧಯಿಲ್ಲ, ಯಾರು ಬೇಕಾದರೂ ರಕ್ತವನ್ನು ದಾನ ಮಾಡಬಹುದಾಗಿದೆ. ರಕ್ತದಾನ ಮಾಡುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಆಗುವುದಿಲ್ಲ, ಇದರ ಬಗ್ಗೆ ವಂದತಿಗಳನ್ನು ನಂಬಬೇಡಿ ಎಂದು ಚಂದ್ರಶೇಖರ್ ಹೇಳಿದರು.
ಈ ರಕ್ತದಾನ ಶಿಬಿರದಲ್ಲಿ ಜಿಲ್ಲಾ ಅಸ್ಪ್ರತೆಯ ರಕ್ತ ನಿಧಿ ಕೇಂದ್ರದ ಡಾ.ರೂಪರವರ ನೇತೃತ್ವದಲ್ಲಿ ಶಿಬಿರವನ್ನು ನಿರ್ವಹಣೆ ಮಾಡಿದರು ಈ ಶಿಬಿರದಲ್ಲಿ ಸುಮಾರು 70 ಯೂನಿಟ್‍ಗಳ ರಕ್ತವನ್ನು ಸಂಗ್ರಹ ಮಾಡಲಾಯಿತು.
ಮುಖಂಡರಾದ ಎನ್.ಡಿ.ಕುಮಾರ್, ದಾದಾಪೀರ್, ಪೈರೋಜ್, ಜಾಫರ್, ಜಬೀವುಲ್ಲಾ, ಸೈಯದ್ ಬಾಷ್, ಇಮ್ರಾನ್, ಆರಿಫ್, ಅತವುಲ್ಲಾ, ಇನಾಯತ್ ಸೇರಿದಂತೆ ಇತರರು ಭಾಗವಹಿಸಿದ್ದರು.