ಜಮೀರ್ ಸಿಎಂ ಆಗುವ ಆಸೆಗೆ ವಿರಕ್ತ ಮಠದ ಶ್ರೀಗಳ ಆಶೀರ್ವಾದ

1 Min Read

ಬೆಳಗಾವಿ: ಇತ್ತೀಚೆಗೆ ಸಿಎಂ ಆಗುವ ಆಸೆಯನ್ನು ಜಮೀರ್ ಅಹ್ಮದ್ ಕೂಡ ವ್ಯಕ್ತಪಡಿಸಿದ್ದರು. ನಮ್ಮ ಸಮುದಾಯದ ಉದ್ಧಾರಕ್ಕೋಸ್ಕರ ಸಿಎಂ ಆಗಬೇಕು ಎಂದಿದ್ದರು. ಇದೀಗ ಈ ಮಾತಿಗೆ ಶ್ರೀಗಳ ಆಶೀರ್ವಾದ ಸಿಕ್ಕಿದೆ. ಮುಂದೆ ಜಮೀರ್ ಸಿಎಂ ಆಗುತ್ತಾರೆ ಎಂದು ವಿರಕ್ತ ಮಠದ ಶ್ರೀ ಕುಮಾರೇಶ್ವರ ಸ್ವಾಮೀಜಿಗಳು ನುಡಿದಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಜಮೀರ್ ಅಹ್ಮದ್ ಜಾತಿ, ಧರ್ಮ ಎಂಬುದನ್ನು ನೋಡುವುದಿಲ್ಲ. ಸರ್ವಧತ್ಮೀಯರನ್ನು ಪ್ರೀತಿ, ವಿಶ್ವಾಸದಿಂದ ಕಾಣುತ್ತಾರೆ. ಸಮಾಜ ಸೇವೆಯನ್ಬು ಮಾಡುತ್ತಾ ಬಂದಿದ್ದಾರೆ. ಅವರು ಮತ್ತೊಮ್ಮೆ ಮಂತ್ರಿಯಾಗಬೇಕು. ಮಠಕ್ಕೆ ಬರಬೇಕು. ಮುಂದೆ ಸಿಎಂ ಆಗಲಿ ಎಂದು ಆಶೀರ್ವಾದ ಕೂಡ ಮಾಡಿದ್ದಾರೆ.

ಶಾಸಕ ಜಮೀರ್ ಅಹ್ಮದ್ ಬೆಳಗಾವಿ ಪ್ರವಾಸದಲ್ಲಿದ್ದು, ಹಾಗೇ ಯಕ್ಕುಂಡಿ ಗ್ರಾಮದ ದರ್ಗಾ ಮತ್ತು ಮಠಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಕಾರ್ಯಕ್ರಮ ನಡೆಸಲಾಗಿದೆ. ಕಾರ್ಯಕ್ರಮದಲ್ಲಿ ಸ್ವಾಮೀಜಿಯ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಜಮೀರ್, ಹಿಂದೂ ಮುಸ್ಲಿಂ ಭಾವೈಕ್ಯದ ಪ್ರತೀಕವಾದ ದರ್ಗಾಗೆ ಭೇಟಿ ನೀಡಿದ್ದು, ನನಗೆ ತುಂಬಾ ಖುಷಿ ನೀಡಿದೆ. ಮಹಾಂತೇಶ ಕೌಜಲಗಿ ನಮ್ಮಲ್ಲಿ ವಿಶೇಷ ಪವಾಡದ ದರ್ಗಾ ಇದೆ ಅಲ್ಲಿಗೆ ಬರಬೇಕು ಎಂದಿದ್ದರು. ಬರುವುದಕ್ಕೆ ಸಮಯ ಆಗಿರಲಿಲ್ಲ. ಸಚಿವನಾಗಿದ್ದಾಗ ಅನುದಾನ ನೀಡಿದ್ದೆ. ಆದರೆ ಇಂದು ಬಾಬಾ ನನ್ನನ್ನು ಕರೆಸಿಕೊಂಡಿದ್ದಾರೆ. ಅದು ನನ್ನ ಪುಣ್ಯ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *