ಬೆಂಗಳೂರು; ಮನೆಯಿಂದ ಹೊರ ಬರುವುದಕ್ಕೂ ಮುನ್ನವೇ ಜನ ಚಿಂತೆ ಮಾಡುವಂತ ಪರಿಸ್ಥಿತಿ ನಿರ್ಮಾಣ ಆಗಿದೆ. ಅದರಲ್ಲೂ ಬಿಸಿಲಿನ ಬೇಗೆ ಹೆಚ್ಚಾಗಿದೆ. ಈ ರಣಬಿಸಿಲಿನ ತಾಪಕ್ಕೆ ಸಾಮಾನ್ಯವಾಗಿ ಕಾಯಿಲೆಗಳು ಬೀಳುವ ಸಾಧ್ಯತೆ ಇದೆ. ಇನ್ನು ಮುಂದಿನ ನಾಲ್ಕು ದಿನಗಳಲ್ಲಿ ಬಿಸಿಲು ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಅದರಿಂದ ಪಾರಾಗುವುದಕ್ಕೆ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ.

ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಕಾರಾವಾರ ಹಾಗೂ ಕರಾವಳಿ ಭಾಗದಲ್ಲಿ 40 ರಿಂದ 42 ಡಿಗ್ರಿ ಸೆಲ್ಸಿಯಸ್ ವರೆಗೂ ಗರಿಷ್ಠ ಉಷ್ಣಾಂಶ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮಾರ್ಚ್ ತಿಂಗಳಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಸಾಧ್ಯತೆ ಇರುತ್ತದೆ. ಹೀಗಾಗಿ ಆರೋಗ್ಯ ಇಲಾಖೆ ಗೈಡ್ ಲೈನ್ಸ್ ಹೊರಡಿಸಿದ್ದು, ಹೆಚ್ಚು ನೀರು ಕುಡಿಯುವುದು, ಪ್ರಯಾಣ ಮಾಡುವ ಸಮಯದಲ್ಲೂ ನೀರನ್ನು ಹೆಚ್ಚಾಗಿ ಕುಡಿಯುವುದು.

ನಿಂಬೆ ಹಣ್ಣಿನ ಜ್ಯೂಸ್ ಅಥವಾ ಲಸ್ಸಿ, ಮಜ್ಜಿಗೆ ಅಂಶವನ್ನ ಸೇವಿಸುವುದು, ನೀರಿನ ಅಂಶ ಹೊಂದಿರುವ ಹಣ್ಣು, ತರಕಾರಿ ಸೇವಿಸುವುದು, ತಿಳಿ ಬಣ್ಣದ ಅಥವಾ ಹತ್ತು ಬಟ್ಟೆಯನ್ನ ಧರಿಸುವುದು, ಹೊರ ಹೋಗುವಾಗ ಛತ್ರಿ, ಟೋಪಿಯಂತಹ ಏನಾದರೂ ಸರಿ ನೆತ್ತಿಗೆ ಬಿಸಿಲು ಬೀಳದಂತೆ ನೋಡಿಕೊಳ್ಳುವುದು, ಉತ್ತಮ ಗಾಳಿ ಬೀಸುವಂತಹ ಜಾಗದಲ್ಲಿ ಇರುವುದು ಉತ್ತಮ. ಹೀಗೆ ಹಲವು ಸುರಕ್ಷತಾ ಕ್ರಮಗಳನ್ನ ತೆಗೆದುಕೊಂಡು, ಬಿಸಿಲಿನಿಂದ ರಕ್ಷಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

